ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಉದ್ಯೋಗ ಮಾಹಿತಿಗೆ ನಿಮ್ಮೆಲ್ಲರಿಗೂ ಸ್ವಾಗತ ನಿಮಗೆಲ್ಲಾ ತಿಳಿದಿರುವ ಹಾಗೆ ಜಾಬ್ಸ್ ಬಿಂದು ಜಾಲತಾಣದಲ್ಲಿ ನಾವು ಪ್ರತಿ ದಿನ ಎಲ್ಲ ಅಭ್ಯರ್ಥಿಗಳಿಗೆ ಸಹಾಯವಾಗಲೆಂದು ಸರ್ಕಾರಿ ಹುದ್ದೆಗಳ ಮಾಹಿತಿ ಆಗಿರಬಹುದು ಅದು ಕೇಂದ್ರ ಸರಕಾರದಾಗಿರಬಹುದು ಅಥವಾ ರಾಜ್ಯ ಸರ್ಕಾರದ ಆಗಿರಬಹುದು ಅಧಿಕೃತವಾಗಿ ಎಲ್ಲರಿಗಿಂತ ಮುಂಚಿತವಾಗಿ ನಿಮಗೆ ಒದಗಿಸುತ್ತೇವೆ ಆರ್ಟಿಕಲ್ ಮೂಲಕ.
ಇಷ್ಟೇ ಅಲ್ಲದೆ ಪ್ರೈವೇಟ್ ಹುದ್ದೆಗಳ ಮಾಹಿತಿ ಕೂಡ ನಿಮಗೆ ನಾವು ಒದಗಿಸುತ್ತೇವೆ, ಅರ್ಹ ಮತ್ತು ಆಸಕ್ತಿ ಇರುವಂತಹ ಅಭ್ಯರ್ಥಿಗಳು ಸರಕಾರಿ ಹುದ್ದೆಯಾಗಿರಬಹುದು ಅದು ಕೇಂದ್ರ ಹುದ್ದೆ ಆಗಿರಬಹುದು ಅಥವಾ ರಾಜ್ಯ ಹುದ್ದೆ ಆಗಿರಬಹುದು ಅಥವಾ ಪ್ರೈವೇಟ್ ಹುದ್ದೆ ಆಗಿರಬಹುದು. ಪ್ರತಿದಿನ ಇಂತಹ ಹುದ್ದೆಗಳ ಕುರಿತು ಮಾಹಿತಿಯನ್ನು ಪಡೆದುಕೊಳ್ಳಬೇಕೆಂದರೆ ನಮ್ಮ ವಾಟ್ಸಾಪ್ ಗ್ರೂಪ್ ಜಾಯಿನ್ ಆಗಿ ನಾವು ನಿಮಗೆ ಎಲ್ಲರಿಗಿಂತ ಮುಂಚಿತವಾಗಿ ಮಾಹಿತಿಯನ್ನು ನೀಡುತ್ತೇವೆ.
ನಿಮಗೆಲ್ಲಾ ತಿಳಿದಿರುವ ಹಾಗೆ ಭಾರತದ ರೈಲ್ವೆ ಇಲಾಖೆ ನಮ್ಮ ಭಾರತದ ಅತಿ ದೊಡ್ಡ ಉದ್ಯೋಗ ಸಂಸ್ಥೆಗಳಲ್ಲಿ ಒಂದೆಂದು ನಿಮಗೆಲ್ಲ ತಿಳಿದಿರಬಹುದು. ಸುರಕ್ಷತೆ, ಸ್ಥಿರತೆ, ಉತ್ತಮ ವೇತನ ಹಾಗೂ ದೀರ್ಘಕಾಲದ ವೃತ್ತಿ ಬೆಳವಣಿಗೆ ಇನ್ನೂ ಹಲವಾರು ಸೇರಿ ಸರ್ಕಾರದ ಒಳಗಿನ ಅತ್ಯಂತ ಆಕರ್ಷಕ ಹುದ್ದೆಗಳನ್ನು ರೈಲ್ವೆ ಒದಗಿಸುತ್ತದೆ.
ಇವರ ನೇಮಕಾತಿ ಪ್ರಕ್ರಿಯೆಯನ್ನು Railway Recruitment Board (RRB) ನಡೆಸುತ್ತೆ.
ಈ ಬಾರಿ ಹೊರಬಿದ್ದಿರುವುದು RRB Junior Engineer (JE) Recruitment 2025 (CEN 05/2025). ಅಧಿಸೂಚನೆಯಲ್ಲಿ ಹಲವು ಮಹತ್ವದ ತಿದ್ದುಪಡಿಗಳು ನಡೆದಿದೆ.
ಪ್ರಸ್ತುತ ಒಟ್ಟು ಖಾಲಿ ಹುದ್ದೆಗಳ ಸಂಖ್ಯೆ 2,569 ರಿಂದ 2,588 ಕ್ಕೆ ಹೆಚ್ಚಿಸಲಾಗಿದೆ ಹಾಗೂ ಅರ್ಜಿಯ ಕೊನೆಯ ದಿನಾಂಕವನ್ನು ಡಿಸೆಂಬರ್ 10, 2025 ರವರೆಗೆ ವಿಸ್ತರಿಸಲಾಗಿದೆ ಹೀಗಾಗಿ ಇದೊಂದು ಸುವರ್ಣ ಅವಕಾಶ ಎಂದು ಹೇಳಬಹುದು ನಿಮಗೆಲ್ಲ ತಿಳಿದೇ ಇರಬಹುದು ಸಾಮಾನ್ಯವಾಗಿ ನಾವು ಅರ್ಜಿ ಸಲ್ಲಿಸಲು ಮುಂದಾಗ ಹಲವಾರು ರೀತಿಯ ಪ್ರಶ್ನೆಗಳು ಉಂಟಾಗುತ್ತೆ ಸಾಮಾನ್ಯವಾಗಿ ನಿಮಗೆ ತಿಳಿಸುವುದಾದರೆ ಇಂಥ ಪ್ರಶ್ನೆಗಳು ಹುಟ್ಟಿಕೊಳ್ಳುತ್ತೆ ಗಮನಿಸಿ.
ಅರ್ಜಿ ಸಲ್ಲಿಸಲು ವಯೋಮಿತಿ ಎಷ್ಟಿರಬೇಕು..? ಶೈಕ್ಷಣಿಕ ಅರ್ಹತೆ ಏನಾಗಿರಬೇಕು..? ಪ್ರತಿ ತಿಂಗಳ ವೇತನ ಎಷ್ಟು..? ಅರ್ಜಿ ಯಾವಾಗಿನಿಂದ ಪ್ರಾರಂಭವಾಗುತ್ತೆ..? ಅರ್ಜಿ ಕೊನೆಯ ದಿನಾಂಕ ಯಾವುದು..? ಅರ್ಜಿ ಶುಲ್ಕ ಎಷ್ಟು..? ಹೀಗೆ ಒಂದಲ್ಲ ಎರಡಲ್ಲ ಹತ್ತು ಹಲವಾರು ರೀತಿಯ ಪ್ರಶ್ನೆಗಳು ನಿಮ್ಮನ್ನ ಕಾಡುತ್ತೆ ನಿಮ್ಮೆಲ್ಲ ಈ ಮೇಲಿನ ಪ್ರಶ್ನೆಗಳಿಗೆ ನಿಮಗಂತಲೇ ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿಯನ್ನ ಒದಗಿಸಿದ್ದೇವೆ, ಇಂದಿನ ಈ ಒಂದು ಲೇಖನವನ್ನ ಕೊನೆಯವರೆಗೂ ಓದಿ ಹುದ್ದೆಗೆ ಅರ್ಜಿ ಸಲ್ಲಿಸಿ.
ಪ್ರಸ್ತುತ ಖಾಲಿ ಇರುವ ಹುದ್ದೆಗಳ ವಿವರ:
ಈ ಕೆಳಗಡೆ ಎಲ್ಲ ಅಭ್ಯರ್ಥಿಗಳಿಗೆ ಸಹಾಯವಾಗಲೆಂದು ಹುದ್ದೆಗಳ ವಿವರವನ್ನು ನೀಡಲಾಗಿದೆ ಅರ್ಹ ಮತ್ತು ಆಸಕ್ತಿ ಇರುವಂತಹ ಅಭ್ಯರ್ಥಿಗಳು ದಯವಿಟ್ಟು ಲೇಖನವನ್ನು ಒಂದು ಬಾರಿ ಗಮನಿಸಿ ಯಾವ ಯಾವ ಹುದ್ದೆಗಳು ಖಾಲಿ ಇದೆ ಎಂದು ಈ ಕೆಳಗಡೆ ಒದಗಿಸಲಾಗಿದೆ ನಂತರವೇ ನೀವು ಅರ್ಜಿ ಸಲ್ಲಿಸಬಹುದು.
ಈ JE ನೇಮಕಾತಿಯಲ್ಲಿನ ಮುಖ್ಯ ಹುದ್ದೆಗಳು ಈ ಕೆಳಗಿನಂತಿವೆ:
- Junior Engineer (JE) – ಸಿವಿಲ್, ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, S&T ಸೇರಿದಂತೆ ಇನ್ನು ಹಲವಾರು ಶಾಖೆಗಳು
- Depot Material Superintendent (DMS) – ವಸ್ತು ಸಂಗ್ರಹಣೆ, ಸಾಮಗ್ರಿ ನಿರ್ವಹಣೆ
- Chemical & Metallurgical Assistant (CMA) – ಲ್ಯಾಬ್ ಪರೀಕ್ಷೆಗಳು, ಗುಣಮಟ್ಟ ನಿಯಂತ್ರಣ
ಒಟ್ಟು ಎಷ್ಟು ಹುದ್ದೆಗಳಿವೆ..?
Table of Contents
ಈ ನೇಮಕಾತಿಯಲ್ಲಿ ಒಟ್ಟು 2,588 ಹುದ್ದೆಗಳು ಖಾಲಿ ಇದೆ. ಇದರಲ್ಲಿ ಹೆಚ್ಚಿನ ಹುದ್ದೆಗಳು JE ಗೆ ಸೇರಿವೆ. ಪ್ರತ್ಯೇಕ ವಲಯಗಳ ವಿತರಣೆಯನ್ನು RRB ವಲಯದ ಅಧಿಕೃತ ವೆಬ್‌ಸೈಟ್‌ಗಳು ಬಿಡುಗಡೆ ಮಾಡುತ್ತವೆ, ಆದ್ದರಿಂದ ಅಭ್ಯರ್ಥಿಗಳು ತಮ್ಮ ವಲಯದ ಅಧಿಸೂಚನೆಯನ್ನು ನೋಡಿಕೊಳ್ಳುವುದು ಬಹಳ ಉತ್ತಮ ಎನ್ನಬಹುದು .
JE ಹುದ್ದೆಗಳು ಯಾವಾಗಲೂ ಅತ್ಯಂತ ಸ್ಪರ್ಧಾತ್ಮಕವಾಗಿ ಕಾರಣವಾಗಿರುತ್ತವೆ ದಯವಿಟ್ಟು ಗಮನಿಸಿ:
- ಹೆಚ್ಚಿನ ಹುದ್ದೆಗಳು
- ಸ್ಥಿರವಾದ ಕೆಲಸ
- ತಾಂತ್ರಿಕ ಜ್ಞಾನ ಬಳಸುವ ಅವಕಾಶ
- ವೃತ್ತಿಜೀವನದಲ್ಲಿ ವೇಗವಾಗಿ ಬೆಳವಣಿಗೆ
ಅರ್ಜಿ ಪ್ರಕ್ರಿಯೆ ಹಂತ ಹಂತವಾಗಿ:

ಈ ಬಾರಿ ಅರ್ಜಿ ಸಲ್ಲಿಸುವುದು ಸಂಪೂರ್ಣ ಆನ್ಲೈನ್ ಮೂಲಕವೇ ಇರುತ್ತೆ ಆಫ್ಲೈನ್ ಮೂಲಕ ಇರುವುದಿಲ್ಲ ದಯವಿಟ್ಟು ಗಮನಿಸಿ. ಹೊಸ ಅಭ್ಯರ್ಥಿಗಳಿಗೆ ಪ್ರಕ್ರಿಯೆ ತುಂಬಾ ಸರಳವಾಗಿದ್ದರೂ, ಕೆಲವು ವಿವರಗಳಿಗೆ ಗಮನಕೊಡುವುದು ತಪ್ಪುಗಳನ್ನು ತಪ್ಪಿಸುತ್ತದೆ.
ಅರ್ಜಿ ಸಲ್ಲಿಸುವ ಹಂತಗಳು:
- RRB ಅಧಿಕೃತ ಅರ್ಜಿ ವೆಬ್‌ಸೈಟ್‌ಗೆ ಭೇಟಿ ಕೊಡಿರಿ – rrbapply.gov.in
- “CEN 05/2025 – RRB JE” ಎಂಬ ವಿಭಾಗ ಆಯ್ಕೆಮಾಡಿ.
- ಹೊಸ ಅಭ್ಯರ್ಥಿಗಳು “New Registration” ಆಯ್ಕೆ ಮಾಡಿ ಖಾತೆ ನಿರ್ಮಿಸಿ.
- ವೈಯಕ್ತಿಕ ಮಾಹಿತಿ, ವಿಳಾಸ, ವಿದ್ಯಾರ್ಹತೆ ಹಾಗೂ ವರ್ಗವನ್ನು ನಿಖರವಾಗಿ ನಮೂದಿಸಿ.
- ಸ್ಕ್ಯಾನ್ ಮಾಡಿದ ಫೋಟೋ, ಸಹಿ, ವೈದ್ಯಕೀಯ ದಾಖಲೆಗಳು, ವಿದ್ಯಾರ್ಹತೆ ಪ್ರಮಾಣಪತ್ರಗಳು ಅಪ್ಲೋಡ್ ಮಾಡಿ.
- ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಿ.
- ಅರ್ಜಿ ಸಲ್ಲಿಸಿದ ನಂತರ ಕನ್ಫರ್ಮೇಶನ್ ಪೇಜ್ ಅನ್ನು ಉಳಿಸಿ PDF ರೂಪದಲ್ಲಿ.
ಸಾಮಾನ್ಯವಾಗಿ ಈ ಕೆಳಗಡೆ ನೀಡಿರುವಂತಹ ತಪ್ಪುಗಳನ್ನು ಸರಿಪಡಿಸಿಕೊಳ್ಳಿ:
- ಕೊನೆಯ ದಿನದವರೆಗೆ ಕಾಯಬೇಡಿ ಏಕೆಂದರೆ ಸರ್ವರ್ ಸಮಸ್ಯೆಗಳು ಸಾಮಾನ್ಯ.
- ಹೆಸರು ಮತ್ತು DOB ಆಧಾರ್/SSLC ಆದೇಶಕ್ಕೆ ಹೊಂದಿಕೆಯಾಗಿರಬೇಕು.
- ಸ್ಪಷ್ಟವಾದ ಪಾಸ್‌ಪೋರ್ಟ್ ಸೈಜ್ ಫೋಟೋ ಅಪ್ಲೋಡ್ ಮಾಡಿರಿ—ಬಹಳ ಅಭ್ಯರ್ಥಿಗಳ ಅರ್ಜಿ ಇದರಿಂದ ತಿರಸ್ಕರಿಸಲಾಗುತ್ತದೆ.
- ಪಾವತಿಯ ನಂತರ ರಸೀದಿ ಡೌನ್‌ಲೋಡ್ ಮಾಡಿ ಉಳಿಸಿಕೊಳ್ಳಿ.
ಪ್ರಸ್ತುತ ಹುದ್ದೆಗಳು ಎಲ್ಲಿ ಕಾಲಿ ಇದೆ..?
ಈ ಬಾರಿ RRB ನೇಮಕಾತಿ ಪೂರ್ತಿ ಭಾರತ ಮಟ್ಟದಲ್ಲಿ ಆಗುವುದರಿಂದ, ನಿಮ್ಮ ಆಯ್ಕೆ ಹಾಗೂ ವಲಯದ ಆಧಾರದಲ್ಲಿ ಕೆಳಗಿನ ಸ್ಥಳಗಳಲ್ಲಿ ನಿಯೋಜನೆ ಸಾಧ್ಯವಾಗಿರುತ್ತೆ:
- ಬೆಂಗಳೂರು
- ಮುಂಬೈ
- ಚೆನ್ನೈ
- ಹೈದರಾಬಾದ್
- ಕೊಲ್ಕತ್ತಾ
- ಅಹಮದಾಬಾದ್
- ಭೋಪಾಲ್
- ಗುಹಾವಟಿ
- ಜಬಲ್ಪುರ್
- ತಿರುವನಂತಪುರಂ … ಮತ್ತು ಇನ್ನೂ ಹಲವು
ಸಂಬಳ ಮತ್ತು ಅನುಕೂಲಗಳು.? ಏಕೆ JE ಪೋಸ್ಟ್ ಆಕರ್ಷಕ.?
RRB JE ಹುದ್ದೆಗೆ 7ನೇ ವೇತನ ಆಯೋಗದ Level-6 Pay Matrix ಅನ್ವಯಿಸುತ್ತದೆ.

- ಮೂಲ ವೇತನ: ₹35,400
- DA + HRA + TA: ಸೇರಿ ₹52,000 – ₹58,000 (ನಗರದ ಮೇಲೆ ಅವಲಂಬನೆ)
- ಪಿಂಚಣಿ + ವೈದ್ಯಕೀಯ ಸೌಲಭ್ಯ
- ಕುಟುಂಬ ಭದ್ರತಾ ಯೋಜನೆ
- ಸ್ಥಿರ ಉದ್ಯೋಗ
- ಪ್ರಗತಿ (Promotion) ಅವಕಾಶ – SSE ಹುದ್ದೆಗೆ ಹೋಗುವ ದಾರಿ
ಅರ್ಜಿ ಸಲ್ಲಿಸಲು ವಯೋಮಿತಿ ಎಷ್ಟಿರಬೇಕು..?
1 ಜನವರಿ 2026ರಂತೆ ವಯೋಮಿತಿ ನಿಗದಿಪಡಿಸಲಾಗಿದೆ.
- ಕನಿಷ್ಟ ವಯಸ್ಸು: 18 ವರ್ಷ
- ಗರಿಷ್ಠ ವಯಸ್ಸು: 36 ವರ್ಷ
ವಯೋಮಿತಿ ಸಡಿಲಿಕೆ:
- SC/ST: +5 ವರ್ಷ
- OBC-NCL: +3 ವರ್ಷ
- PwBD: +10 ವರ್ಷ
ಅರ್ಜಿ ಸಲ್ಲಿಸುವ ಮುಖ್ಯ ದಿನಾಂಕಗಳು:
- ಅಧಿಸೂಚನೆ ಬಿಡುಗಡೆ: ಅಕ್ಟೋಬರ್ 28, 2025
- ಅರ್ಜಿ ಆರಂಭ: ಅಕ್ಟೋಬರ್ 31, 2025
- ಅರ್ಜಿ ಕೊನೆಯ ದಿನ: ಡಿಸೆಂಬರ್ 10, 2025
- ಶುಲ್ಕ ಪಾವತಿ ಕೊನೆಯ ದಿನ: ಡಿಸೆಂಬರ್ 12
ಶೈಕ್ಷಣಿಕ ಅರ್ಹತೆ ಮತ್ತು ಅಗತ್ಯ ಅನುಭವದ ವಿವರಣೆ:
1. Junior Engineer (JE)
- 3 ವರ್ಷಗಳ ಎಂಜಿನಿಯರಿಂಗ್ ಡಿಪ್ಲೊಮಾ ಅಥವಾ
- B.E./B.Tech ಪದವಿ
- ಸಂಬಂಧಿತ ಶಾಖೆಗಳಲ್ಲಿ ಮಾತ್ರ: Civil, Electrical, Mechanical, Electronics, S&T ಮುಂತಾದವು
2. Depot Material Superintendent (DMS)
- ಯಾವುದೇ ಶಾಖೆಯ ಎಂಜಿನಿಯರಿಂಗ್ ಡಿಪ್ಲೊಮಾ
3. Chemical & Metallurgical Assistant (CMA)
- B.Sc (Physics + Chemistry)
- ಕನಿಷ್ಠ 45% ಅಂಕಗಳು
ಅರ್ಜಿ ಶುಲ್ಕ ಎಷ್ಟಿರುತ್ತೆ..?
- General/OBC/EWS: ₹500
- CBT 1 ಬರೆಯುವುದಾದರೆ ₹400 ರಿಫಂಡ್
- SC/ST/PwBD/Ex-Sm/Female/Minorities/EBC: ₹250
- ಪರೀಕ್ಷೆಯಲ್ಲಿ ಹಾಜರಾದರೆ ₹250 ರಿಫಂಡ್
ಹೇಗೆ ಹಣ ಪಾವತಿ ಮಾಡಬೇಕು..?
- UPI ಮೂಲಕ ಪಾವತಿ ಮಾಡಿ ನಂತರ ಪಾವತಿ ಸ್ಥಿತಿ “Success” ಆಗಿ ಬಂದಿದಿಯೋ ಅಥವಾ ಇಲ್ಲವೇ ನೋಡಿ.
- ಒಂದೇ ಸಲ ಕ್ಲಿಕ್ ಮಾಡಿ, ಎರಡು ಬಾರಿ ಪಾವತಿ ಆಗದಂತೆ ಜಾಗರೂಕತೆ
- SMS/ಇಮೇಲ್ ದೃಢೀಕರಣ ಬಂದ ನಂತರವೇ ಮುಂದಿನ ಹಂತಕ್ಕೆ ಹೋಗಿ
ಆಯ್ಕೆ ಪ್ರಕ್ರಿಯೆ ಹೇಗೆ..?
RRB JE ನೇಮಕಾತಿ ಹಂತಗಳು:

CBT 1 — Screening Test
- ಅವಧಿ: 90 ನಿಮಿಷ
- ಪ್ರಶ್ನೆಗಳು: 100
- ನೆಗೆಟಿವ್ ಮಾರ್ಕಿಂಗ್: 1/3
ವಿಷಯಗಳು:
- ಗಣಿತ – 30
- ಸಾಮಾನ್ಯ ಬುದ್ಧಿಮತ್ತೆ – 25
- ಸಾಮಾನ್ಯ ಜ್ಞಾನ – 15
- ವಿಜ್ಞಾನ – 30
CBT 2 — Final Merit Test
- ಅವಧಿ: 120 ನಿಮಿಷ
- ಪ್ರಶ್ನೆಗಳು: 150
ವಿಷಯಗಳ ವಿವರಣೆ:
- ಸಾಮಾನ್ಯ ಜ್ಞಾನ – 15
- ಭೌತಶಾಸ್ತ್ರ & ರಸಯಾನಶಾಸ್ತ್ರ – 15
- ಕಂಪ್ಯೂಟರ್ ಮೂಲಭೂತಗಳು – 10
- ಪರಿಸರ & ಮಾಲಿನ್ಯ ನಿಯಂತ್ರಣ – 10
- ತಾಂತ್ರಿಕ ವಿಷಯಗಳು – 100
ವೈದ್ಯಕೀಯ ಪರೀಕ್ಷೆ (Medical Test)
👉 ತಯಾರಿಗಾಗಿ ಸಲಹೆಗಳು:
- NCERT 8–10 ವಿಜ್ಞಾನ ಪುಸ್ತಕವೇ ಉತ್ತಮ ಮೂಲ ಮದ್ದು ಆಗಿರುತ್ತೆ.
- RRB ಹಿಂದಿನ ವರ್ಷದ ಪ್ರಶ್ನೆಗಳು
- ಸಾಮಾನ್ಯ ಜ್ಞಾನಕ್ಕೆ ದಿನನಿತ್ಯ ಪತ್ರಿಕೆ ಸಂಗ್ರಹಣೆ
- ತಾಂತ್ರಿಕ ವಿಷಯಗಳಿಗೆ ಡಿಪ್ಲೊಮಾ ನೋಟ್ಸ್ ಪರಿಪೂರ್ಣ
ಪ್ರಮುಖ ಲಿಂಕ್ ಗಳು
| Important Links | Access |
| Notification PDF RRB JE Corrigendum Notice | Click Here Click here |
| Official Website | Click Here |
| Apply Online | Click Here |
ಕೊನೆ ಮಾತು:
ಈ ಮೇಲ್ಗಡೆ ನಿಮಗಂತೆ ನಾವು RRB JE ನೇಮಕಾತಿ 2025 ಇದರ ಕುರಿತು ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಿದ್ದೇವೆ ಹಾಗೆ ಇಷ್ಟೇ ಅಲ್ಲದೆ ಅರ್ಜಿ ಸಲ್ಲಿಸುವ ಪ್ರಮುಖ ಲಿಂಕ್ ಗಳಾಗಿರಬಹುದು ಅಧಿಕೃತ ವೆಬ್ಸೈಟ್ ಹಾಗೆ ಅಧಿಕೃತ ಅಧಿಸೂಚನೆ ನೋಟಿಫಿಕೇಶನ್ ಲಿಂಕ್ ಕೂಡ ಒದಗಿಸುತ್ತೇವೆ ಬೇಗ ಬೇಗ ಹೋಗಿ ಅದರ ಮೇಲೆ ಕ್ಲಿಕ್ ಮಾಡಿಕೊಂಡು ಡೌನ್ಲೋಡ್ ಮಾಡಿಕೊಳ್ಳಿ ನಂತರ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ನಿಮ್ಮ ವಯಸ್ಸಿನ ಹಾಗೂ ಶೈಕ್ಷಣಿಕ ಅರ್ಹತೆ ಆಧಾರದ ಮೇಲೆ.
FAQs ಸಾಮಾನ್ಯವಾಗಿ ಕೇಳಲಾಗುವ:
1. RRB JE 2025 ಗೆ ಯಾರು ಅರ್ಜಿ ಹಾಕಬಹುದು?
ಎಂಜಿನಿಯರಿಂಗ್ ಡಿಪ್ಲೊಮಾ/ಡಿಗ್ರಿ ಅಥವಾ B.Sc (CMAಗಾಗಿ) ಪಡೆದವರು ಅರ್ಜಿ ಹಾಕಬಹುದು.
2. ಅರ್ಜಿ ಶುಲ್ಕಕ್ಕೆ ರಿಫಂಡ್ ಸಿಗುತ್ತದೆಯೇ?
CBT 1 ಪರೀಕ್ಷೆಯಲ್ಲಿ ಹಾಜರಾದರೆ ಸಂಪೂರ್ಣ/ಭಾಗಶಃ ರಿಫಂಡ್ ಸಿಗುತ್ತದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ ನೋಟಿಫಿಕೇಶನ್ ನಿಮಗೆ ಒದಗಿಸಿದ್ದೇವೆ ಚೆಕ್ ಮಾಡಿ.
3. CBT ಪರೀಕ್ಷೆ ಆನ್ಲೈನ್ವೇ?
ಹೌದು, ಎಲ್ಲಾ ಪರೀಕ್ಷೆಗಳು ಕಂಪ್ಯೂಟರ್ ಆಧಾರಿತ.
4. JE ಹುದ್ದೆಗೆ ಅನುಭವ ಅವಶ್ಯಕವೇ?
ಅನುಭವ ಅಗತ್ಯವಿರುವುದಿಲ್ಲ, ಹೊಸ ಪದವೀಧರರು ಸಹ ಅರ್ಜಿ ಹಾಕಬಹುದು.
5. ಸಿಲೆಬಸ್ ಕಷ್ಟವಾಗುತ್ತದೆಯೇ?
ಇಲ್ಲ ಏಕೆಂದರೆ ಡಿಪ್ಲೊಮಾ ಮಟ್ಟದ ತಾಂತ್ರಿಕ ಪ್ರಶ್ನೆಗಳೇ ಮುಖ್ಯ.
6. ಹುದ್ದೆ ನಗರಗಳಲ್ಲೇ ಸಿಗುತ್ತದೆಯೇ?
ನಗರ ಮತ್ತು ಜಂಕ್ಷನ್ ಪ್ರದೇಶಗಳಲ್ಲಿಯೂ, ಕೆಲವೊಮ್ಮೆ ಉಪನಗರ ಪ್ರದೇಶಗಳಲ್ಲಿಯೂ ಪೋಸ್ಟಿಂಗ್ ಸಿಗಬಹುದು.
7. ಎಷ್ಟು ವರ್ಷಕ್ಕೊಮ್ಮೆ JE ನೇಮಕಾತಿ ನಡೆಯುತ್ತದೆ?
ನಿಯಮಿತವಾಗಿ ನಡೆಯುತ್ತದೆ, ಆದರೆ ವರ್ಷಾವರ್ಷ ಯೋಜನೆ ಬದಲಾಗಬಹುದು.
8. CBT 2 ನಲ್ಲಿ ತಾಂತ್ರಿಕ ವಿಷಯಗಳು ಕಠಿಣವೇ?
ತಾಂತ್ರಿಕ ಜ್ಞಾನ ಹೊಂದಿರುವವರಿಗೆ ಇದು ಸುಲಭ. ಮೂಲಭೂತಗಳ ಮೇಲೆ ಪಟ್ಟು ಸಾಕು.
9. ವೈದ್ಯಕೀಯ ಪರೀಕ್ಷೆ ಕಡ್ಡಾಯವೇ?
ಹೌದು. ಇದು ರೈಲ್ವೆ ಸುರಕ್ಷತೆಗೆ ಸಂಬಂಧಿಸಿದ ಹುದ್ದೆ ಆದ್ದರಿಂದ ಕಡ್ಡಾಯ.
10. ವಯೋಮಿತಿಯಲ್ಲಿ ಸಡಿಲಿಕೆ ಎಲ್ಲಾ ಹುದ್ದೆಗಳಿಗೆ ಅನ್ವಯಿಸುತ್ತದೆಯೇ?
ಹೌದು, ಸರ್ಕಾರದ ನಿಯಮ ಬಂದಂತೆ ಎಲ್ಲ ಹುದ್ದೆಗಳಿಗೆ ಅನ್ವಯಿಸುತ್ತದೆ.