ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಒಂದು ಲೇಖನದಲ್ಲಿ ಕೆಎಂಎಫ್ ನೇಮಕಾತಿ 2025 ಇದರ ಕುರಿತು ಮಾಹಿತಿಯನ್ನು ತಿಳಿದುಕೊಂಡು ಬರೋಣ ಬನ್ನಿ.
ನೀವೇನಾದರೂ ಕೆಎಂಎಫ್ ನಲ್ಲಿ ಸರ್ಕಾರಿ ಹುದ್ದೆ ಪಡೆದುಕೊಳ್ಳಬೇಕು ಅಂತ ನಿಮ್ಮ ಕನಸಾಗಿದ್ದರೆ ಇಂದಿನ ಈ ಒಂದು ಲೇಖನ ನಿಮಗಾಗಿ ಇದೆ ಹೀಗಾಗಿ ಯಾರು ಕೂಡ ಇಂದಿನ ಈ ಒಂದು ಲೇಖನವನ್ನು ಅರ್ಧಂಬರ್ಧ ಓದಬೇಡಿ ಏಕೆಂದರೆ ನಿಮಗಂತಲೇ ನಾವು ಈ ಕೆಳಗಡೆ ಕೆಎಂಎಫ್ ನೇಮಕಾತಿ 2025 ಖಾಲಿ ಇರುವ ಹುದ್ದೆಗಳ ಕುರಿತು ಸಂಪೂರ್ಣ ವಿವರವಾಗಿ ನಿಮಗಂತಲೇ ಮಾಹಿತಿಯನ್ನು ಈ ಕೆಳಗಡೆ ಒದಗಿಸಿದ್ದೇವೆ.
ಉದ್ಯೋಗ ಹುಡುಕುತ್ತಿರುವ ಅನೇಕ ಅಭ್ಯರ್ಥಿಗಳಿಗೆ 2025ರ ಆರಂಭದಲ್ಲೇ ಒಂದು ಶುಭಸುದ್ದಿ ಅಂತ ಹೇಳಬಹುದು ಈಗ ಕೆಎಂಎಫ್ ನಲ್ಲಿ ಒಂದು ಬಾರಿ ಅಲ್ಲ ಎರಡು ಬಾರಿ ಅಲ್ಲ ಒಟ್ಟಾರೆಯಾಗಿ ಹಲವಾರು ಬಾರಿ ನೇಮಕಾತಿ ನಡೆಯುತ್ತಿದೆ.
KMF SHIMUL (ಶಿವಮೊಗ್ಗ ಹಾಗೂ ದಾವಣಗೆರೆ, ಮತ್ತು ಚಿತ್ರದುರ್ಗ ಜಿಲ್ಲೆಯ Co-operative Milk Producers’ Societies Union Limited) ಸಂಸ್ಥೆ ಹೊಸ ನೇಮಕಾತಿಯ ವಿವರಗಳನ್ನು ಪ್ರಕಟಿಸಿದೆ. ಒಟ್ಟು ಹತ್ತು ಉದ್ಯಾನ ಇವತ್ತು ಹುದ್ದೆ ಅಲ್ಲ 100 ಹುದ್ದೆ ಅಲ್ಲ ಒಟ್ಟಾರೆಯಾಗಿ 194 ಹುದ್ದೆಗಳಿಗೆ ಅವಕಾಶ ನೀಡಲಾಗಿದ್ದು, ವಿವಿಧ ಹಂತಗಳಲ್ಲಿ ತಾಂತ್ರಿಕ, ನಿರ್ವಹಣಾ ಮತ್ತು ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಪ್ರಸ್ತುತ ಇಂದಿನ ಈ ಲೇಖನದಲ್ಲಿ, ಈ ನೇಮಕಾತಿ ಬಗ್ಗೆ ಅಗತ್ಯವಿರುವ ಎಲ್ಲ ಮಾಹಿತಿಯನ್ನು ಸರಳ, ಸ್ಪಷ್ಟ ಮತ್ತು ಉಪಯುಕ್ತ ರೀತಿಯಲ್ಲಿ ಅಭ್ಯರ್ಥಿಗಳಿಗಾಗಿ ನೀಡಲಾಗಿದೆ. ನೀವು ಮೊಟ್ಟಮೊದಲ ಬಾರಿ ಅರ್ಜಿ ಹಾಕುತ್ತಿದ್ದರೂ ಅಥವಾ ಸರ್ಕಾರಿ / ಸಹಕಾರಿ ಕ್ಷೇತ್ರದಲ್ಲಿ ಅನುಭವವಿದ್ದರೂ ಈ ಲೇಖನ ನಿಮಗೆ ಉಪಯೋಗವಾಗಲಿದೆ ಹೀಗಾಗಿ ಯಾರು ಕೂಡ ಇಂದಿನ ಈ ಒಂದು ಲೇಖನವನ್ನ ಅರ್ಧಂಬರ್ಧ ಓದಬೇಡಿ ಕೊನೆಯವರೆಗೂ ಓದಿ.
KMF SHIMUL ಸಂಸ್ಥೆಯ ಬಗ್ಗೆ ಪರಿಚಯ:

Table of Contents
ಕರ್ನಾಟಕದ ಹಾಲು ಉತ್ಪಾದಕರಿಗೆ ಬೆಂಬಲ ನೀಡುವ KMF ಸಂಸ್ಥೆಯ ವಿವಿಧ ಘಟಕಗಳಲ್ಲಿ SHIMUL ಒಂದು ಪ್ರಮುಖ ವಿಭಾಗವಾಗಿದೆ. ಈ ಸಂಸ್ಥೆಯ ಮುಖ್ಯ ಗುರಿ ಹಾಗೂ ಇದರ ಉದ್ದೇಶಗಳು ತಿಳಿದುಕೊಳ್ಳಿ.
- ಹಾಲು ಉತ್ಪಾದಕರಿಗೆ ನ್ಯಾಯವಾದ ಬೆಲೆ ನೀಡುವುದು
- ಗುಣಮಟ್ಟದ ಹಾಲು ಮತ್ತು ಹಾಲು ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸುವುದು
- ಸ್ಥಳೀಯ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವುದು
ಕೋ-ಆಪರೇಟಿವ್ ಕ್ಷೇತ್ರದಲ್ಲಿ SHIMUL ಕೆಲಸ ಮಾಡುವ ಅವಕಾಶವೇ ಒಂದು ಗೊರವ ಅಂತ ಹೇಳಬಹುದು. ಇಲ್ಲಿ ಅಭ್ಯರ್ಥಿಗಳು ಉದ್ಯೋಗ ಪಡೆಯುವುದರಿಂದ ಈ ಕೆಳಗಿನವು ಸಿಗುತ್ತವೆ.
- ಉದ್ಯೋಗದಲ್ಲಿ ಸ್ಥಿರತೆ
- ಉತ್ತಮ ವೇತನ
- ಆಕರ್ಷಕ ಭತ್ಯೆಗಳು
- ರಾಜ್ಯ ಮಟ್ಟದಲ್ಲಿ ಕಾರ್ಯಪ್ರವೃತ್ತಿಯ ಅವಕಾಶ
ಹೀಗಾಗಿ ಕರ್ನಾಟಕದ ಅನೇಕ ಅಭ್ಯರ್ಥಿಗಳು ಇದೇ ಒಂದು ಕಾರಣದಿಂದ ಬಹುತೇಕ ವಿದ್ಯಾರ್ಥಿಗಳು ಮತ್ತು ಉದ್ಯೋಗ ಅರ್ಹರು ಈ ನೇಮಕಾತಿಗಾಗಿ ಕಾತುರದಿಂದ ಕಾಯುತ್ತಿದ್ದಾರೆ.
ಈ ಬಾರಿ ಯಾವ ಯಾವ ಹುದ್ದೆಗಳಿಗೆ ನೇಮಕಾತಿ..?
ಈ ನೇಮಕಾತಿಯಲ್ಲಿ ವಿವಿಧ ಮಟ್ಟದ ಹುದ್ದೆಗಳು ಒಳಗೊಂಡಿವೆ. ಮುಖ್ಯವಾಗಿ ಈ ಕೆಳಗಡೆ ತಿಳಿಸಿರುವ ಅಂತಹ ಕಾಲಿ ಇರುವಂತ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಅಭ್ಯರ್ಥಿಗಳು ಗಮನವಿಟ್ಟು ಓದಿ.
- Assistant Managers (21 ಹುದ್ದೆಗಳು)
- Technical, Engineering Officers (20 ಹುದ್ದೆಗಳು)
- DT Officers (14)
- Chemist Grade-1 (4)
- Extension Officers (17)
- Accounts / Admin Assistants (39)
- Junior System Operator (13)
- Junior Technicians (50)
ಈ ಮೇಲ್ಗಳ ತಿಳಿಸಿರುವ ಹಾಗೆ ಹುದ್ದೆಗಳು ಖಾಲಿ ಇದೆ ಹಾಗೆ ಈ ಹುದ್ದೆಗಳು ಮ್ಯಾನೇಜ್ಮೆಂಟ್ ರಿಂದ ಡಿಪ್ಲೋಮಾ / ITI ಮಟ್ಟದವರೆಗೂ ಎಲ್ಲ ಅರ್ಹರಿಗೆ ಅವಕಾಶ ಒದಗಿಸುತ್ತವೆ ಅಂದರೆ ನೀವು ಡಿಪ್ಲೋಮಾದಿಂದ ಹಿಡಿದು ಅಥವಾ ಐಟಿಐ ಕಳಿಸಿದರೂ ಸಹ ಅರ್ಜಿ ಸಲ್ಲಿಸಬಹುದು ಇದರ ಕುರಿತು ಅಧಿಕೃತ ಮಾಹಿತಿ ಬೇಕಾಗಿದ್ದಲ್ಲಿ ನಿಮಗಂತೆ ನಾವು ಈ ಕೆಳಗಡೆ ನೋಟಿಫಿಕೇಶನ್ ಲಿಂಕ್ ಒದಗಿಸಿದ್ದೇವೆ. ಅದರ ಮೇಲೆ ಕ್ಲಿಕ್ ಮಾಡಿಕೊಂಡು ಮಾಹಿತಿಯನ್ನು ಓದಬಹುದು ಅಧಿಕೃತವಾಗಿ ಸಿಗುತ್ತೆ.

ಒಟ್ಟು ಎಷ್ಟು ಹುದ್ದೆಗಳು ಖಾಲಿ ಇದೆ..?
ಈ ಕೆಳಗಡೆ ಎಲ್ಲ ಅಭ್ಯರ್ಥಿಗೆ ಸಹಾಯವಾಗಲೆಂದು ತಿಳಿಸಲಾಗಿದೆ ಗಮನಿಸಿ ಒಟ್ಟು 194 ಹುದ್ದೆಗಳು ಘೋಷಿಸಲಾಗಿದೆ. ಹುದ್ದೆಗಳ ಸಂಖ್ಯೆ ಹೆಚ್ಚು ಇದ್ದರೂ, ಉದ್ಯೋಗದಲ್ಲಿ ಇರುವ ಪ್ರಯೋಜನಗಳ ಕಾರಣ ಈ ನೇಮಕಾತಿಗೆ ಸ್ಪರ್ಧೆಯೂ ಹೆಚ್ಚಿನದ್ದಾಗಿದೆ.
- Technical ಮತ್ತು Engineering ಹುದ್ದೆಗಳು ಹೆಚ್ಚು ಕೋರುವ ಸ್ಥಾನಗಳು
- Junior Technician ಮತ್ತು Assistant ಹುದ್ದೆಗಳಿಗೆ ಹೆಚ್ಚು ಅರ್ಜಿ ನಿರೀಕ್ಷೆ
- Assistant Manager ಹುದ್ದೆಗಳು ಅನುಭವ ಮತ್ತು ಅರ್ಹತೆ ಇರುವವರಿಗೆ ಉತ್ತಮ ಅವಕಾಶ
ಅರ್ಜಿ ಸಲ್ಲಿಸುವ ವಿಧಾನ ಹೇಗೆ..?
ಈ ನೇಮಕಾತಿಗೆ ಅರ್ಜಿ ಆನ್ಲೈನ್ ಮೂಲಕ ಸಲ್ಲಿಸಬೇಕು ಹಾಗೆ ಈ ಕೆಳಗಡೆ ಅರ್ಜಿ ಸಲ್ಲಿಸುವ ವಿಧಾನದ ಕುರಿತು ಸಂಪೂರ್ಣ ಮಾಹಿತಿಯನ್ನು ಒದಗಿಸಲಾಗಿದೆ ಗಮನಿಸಬಹುದು.
ಅರ್ಜಿ ಸಲ್ಲಿಸುವ ಸರಳ ಕ್ರಮ:
✔️ ಹಂತ 1: ಅಧಿಕೃತ ಸೈಟ್ಗೆ ಭೇಟಿ
Recruitment 2025 ವಿಭಾಗಕ್ಕೆ ಹೋಗಿ.
✔️ ಹಂತ 2: ಹೊಸ ಖಾತೆ ಸೃಷ್ಟಿಸಿಕೊಳ್ಳಿ
ಮೊಬೈಲ್ ಸಂಖ್ಯೆ ಅಥವಾ ಇಮೇಲ್ ಮೂಲಕ ನೋಂದಣಿ.
✔️ ಹಂತ 3: ವಿವರಗಳನ್ನು ಸರಿಯಾಗಿ ತುಂಬಿ
ನೀಡಬೇಕಾದ ವಿವರಗಳು:
- ವೈಯಕ್ತಿಕ ಮಾಹಿತಿ
- ಶಿಕ್ಷಣ ಮಾಹಿತಿ
- ಅನುಭವ (ಇದರಿದ್ದರೆ)
- ಸಂಪರ್ಕ ವಿವರಗಳು
✔️ ಹಂತ 4: ದಾಖಲೆಗಳನ್ನು ಅಪ್ಲೋಡ್ ಮಾಡಿ
ಉಪ್ಪಲೋಡ್ ಮಾಡಬೇಕಾದ ಪ್ರಮುಖ ದಾಖಲೆಗಳು:
- SSLC/PUC/ಡಿಗ್ರಿ ಪ್ರಮಾಣಪತ್ರ
- Caste Certificate (ಅಗತ್ಯವಿದ್ದರೆ)
- ID Proof (Aadhaar, PAN, DL)
- 1 passport size photo
- Signature
✔️ ಹಂತ 5: ಶುಲ್ಕ ಪಾವತಿಸಿ
ಆನ್ಲೈನ್ ಮೂಲಕ ಮಾತ್ರ ಪಾವತಿ ಮಾಡಬಹುದು.
✔️ ಹಂತ 6: ಅರ್ಜಿ ಸಲ್ಲಿಸಿ ಮತ್ತು ಡೌನ್ಲೋಡ್ ಮಾಡಿ
ಅಂತಿಮವಾಗಿ ಅರ್ಜಿ PDF ರೂಪದಲ್ಲಿ ಉಳಿಸಿಕೊಳ್ಳುವುದು ತುಂಬಾ ಮುಖ್ಯ.
ಉದ್ಯೋಗ ಸ್ಥಳ ಎಲ್ಲಿ ..?
ಈ ನೇಮಕಾತಿಯಲ್ಲಿ ಆಯ್ಕೆಗೊಂಡವರು ಮುಖ್ಯವಾಗಿ ಕೆಳಗಿನ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಾರೆ ಅಂದರೆ ಈ ಕೆಳಗಡೆ ತಿಳಿಸಿರುವ ಜಿಲ್ಲೆಗಳಲ್ಲಿ ನಿಮಗೆ ಉದ್ಯೋಗ ದೊರೆಯುತ್ತೆ:
- ಶಿವಮೊಗ್ಗ
- ದಾವಣಗೆರೆ
- ಚಿತ್ರದುರ್ಗ
ಇನ್ನು ಕೆಲವೊಂದಿಷ್ಟು ಹುದ್ದೆಗಳಿಗಾಗಿ ಮಾತ್ರ:
- ಘಟಕಗಳ ಮಧ್ಯೆ ವರ್ಗಾವಣೆ
- ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಕೆಲಸ
ಇವುಗಳು ಸಂಭವಿಸಬಹುದು.
ಈ ಜಿಲ್ಲೆಗಳು ಉದ್ಯೋಗ, ಆದಾಯ, ಬದುಕಿನ ವೆಚ್ಚ ಮತ್ತು ಸೌಲಭ್ಯಗಳ ದೃಷ್ಟಿಯಿಂದ ಉತ್ತಮ ಆಯ್ಕೆಗಳಾಗಿವೆ.
ವೇತನ, ಭತ್ಯೆಗಳು ಮತ್ತು ಸೌಲಭ್ಯಗಳು..?
ಕೆಎಂಎಫ್ ನೇಮಕಾತಿ ಅಡಿಯಲ್ಲಿ ಆಯ್ಕೆಯಾದವರಿಗೆ ಪ್ರತಿ ತಿಂಗಳು ವೇತನ ₹34,100 ರಿಂದ ₹1,55,200 ವರೆಗೆ ಇದೆ. ಹುದ್ದೆಯ ಪ್ರಕಾರ ವೇತನ ಬದಲಾಗುತ್ತದೆ.
ವೇತನದ ಜೊತೆಗೆ ಸಿಗುವ ಸೌಲಭ್ಯಗಳು:
- ಮೂಲ ವೇತನ
- DA (Dearness Allowance)
- HRA (House Rent Allowance)
- Provident Fund (PF)
- Gratuity
- ವಾರ್ಷಿಕ ವೇತನ ಹೆಚ್ಚಳ
ಈ ಎಲ್ಲಾ ಕಾರಣಗಳಿಂದ SHIMUL ಕೆಲಸ ಸ್ಥಿರವಾಗಿರು ಉದ್ಯೋಗಗಳಲ್ಲಿ ಒಂದಾಗಿದೆ ಅಂತ ಹೇಳಬಹುದು.
ಅರ್ಜಿ ಸಲ್ಲಿಸಲು ವಯೋಮಿತಿ ಎಷ್ಟಿರಬೇಕು..?
ಅಭ್ಯರ್ಥಿಗಳಿಗೆ ಸಹಾಯವಾಗಲಿದ್ದು ಈ ಕೆಳಗಡೆ ಅರ್ಜಿ ಸಲ್ಲಿಸಲು ಇರುವಂತಹ ಕನಿಷ್ಠ ವಯಸ್ಸು ಹಾಗೂ ಗರಿಷ್ಠ ವಯಸ್ಸು ಎಷ್ಟಿರಬೇಕು ಎಂಬುದರ ಕುರಿತು ಅಧಿಕೃತವಾಗಿ ಮಾಹಿತಿಯನ್ನು ಒದಗಿಸಲಾಗಿದೆ ಇದರ ಕುರಿತು ಮಾಹಿತಿ ಅಧಿಕೃತವಾಗಿ ಬೇಕಾಗಿದ್ದರೆ ಡೌಟ್ ಇದ್ದಿದ್ದೇ ಆದಲ್ಲಿ ಅಥವಾ ಪ್ರಶ್ನೆ ಬಂದಿದ್ದೆ ಆದಲ್ಲಿ ಹೌದು ನಾವು ಅಧಿಕೃತ ಮಾಹಿತಿ ತಿಳಿದುಕೊಳ್ಳಬೇಕು ಅಂತ ಅನಿಸಿದರೆ ನಿಮಗಂತೆ ನಾವು ಈ ಕೆಳಗಡೆ ಅಧಿಕೃತ ಅಧಿಸೂಚನೆ ಲಿಂಕು ಒದಗಿಸಿದ್ದೇವೆ ಪ್ರಮುಖ ಲಿಂಕು ವಿಭಾಗದ ಅಡಿಯಲ್ಲಿ.
- ಕನಿಷ್ಠ ವಯಸ್ಸು: 18 ವರ್ಷ
- ಗರಿಷ್ಠ ವಯಸ್ಸು (ಸಡಿಲಿಕೆ ಸೇರಿಸಿ):
- General Merit: 38 ವರ್ಷ
- 2A / 2B / 3A / 3B: 41 ವರ್ಷ
- SC / ST / Cat-1: 43 ವರ್ಷ
👉 ನಿಮ್ಮ ವಯಸ್ಸು ಗರಿಷ್ಠ ಮಿತಿ ಸಮೀಪದಲ್ಲಿದ್ದರೆ, ಅರ್ಜಿ ತಡ ಮಾಡದೆ ಬೇಗನೆ ಸಲ್ಲಿಸುವುದು ಒಳಿತು.
ಅರ್ಜಿ ಸಲ್ಲಿಸುವ ಮುಖ್ಯ ದಿನಾಂಕಗಳು..?

- ಅರ್ಜಿ ಪ್ರಾರಂಭ: 14 ನವೆಂಬರ್ 2025
- ಕೊನೆಯ ದಿನ: 14 ಡಿಸೆಂಬರ್ 2025
ಅತ್ಯಂತ ಮುಖ್ಯವಾದ ಸಂಗತಿ ಏನೆಂದರೆ ನೋಡಿ ಗಮನಿಸಿ ಕೊನೆ ದಿನಾಂಕದಂದು ಸರ್ವರ್ ಬಿಜಿಯಾಗಿರಬಹುದು ಅಥವಾ ಇನ್ಯಾವುದೇ ಕಾರಣದಿಂದಾಗಿ ಕೊನೆ ದಿನ ಹೊರಗೆ ಕಾಯಬೇಡಿ ತಕ್ಷಣ ಅರ್ಜಿ ಸಲ್ಲಿಸಿ ಸುಮ್ಮನೆ ಯಾಕೆ ಕಾಯುತ್ತೀರಿ.
ಶೈಕ್ಷಣಿಕ ಅರ್ಹತೆ ಏನಾಗಿರಬೇಕು..?
ಈ ನೇಮಕಾತಿಯಲ್ಲಿ ಹುದ್ದೆಯ ಪ್ರಕಾರ ಅಗತ್ಯ ಇರುವ ವಿದ್ಯಾರ್ಹತೆಗಳು ಬದಲಾಗುತ್ತವೆ ಹೀಗಾಗಿ ಯಾವ್ಯಾವ ಹುದ್ದೆಗೆ ಯಾವ್ಯಾವ ವಿದ್ಯಾರ್ಹತೆ ಆಗಿರಬೇಕು ಅಂದರೆ ನಿಮ್ಮ ಶೈಕ್ಷಣಿಕ ಆಗಿರಬೇಕು ಎಂದು ತಿಳಿಸಲಾಗಿದೆ ಗಮನಿಸಿ.
| ಹುದ್ದೆ | ಅರ್ಹತೆ |
| Assistant Manager | B.V.Sc & AH / MBA / B.Sc Agriculture + ಅನುಭವ |
| Technical Officers | BE / BTech (Mechanical, Electrical, Dairy) |
| Chemist | B.Sc (Microbiology / Chemistry) |
| Assistants | Any Degree (Accounts → B.Com + Tally ಅಗತ್ಯ) |
| Junior Technician | SSLC + ITI (Electrical/Fitter/Welder ಇತ್ಯಾದಿ) |
👉 ಅನುಭವ ಇರುವವರಿಗೆ ಅಧಿಕ ಪ್ರಯೋಜನ ಹಾಗೂ ಆದ್ಯತೆ.
ಅರ್ಜಿ ಶುಲ್ಕ ಎಷ್ಟಿರುತ್ತದೆ…?
ಕೆಳಗಡೆ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದ ಕುರಿತು ಮಾಹಿತಿಯನ್ನು ತಿಳಿಸಲಾಗಿದೆ.
- SC / ST / Cat-1 / PwD: ₹500
- General & OBC: ₹1000
ಪಾವತಿ ಆನ್ಲೈನ್ ಮಾತ್ರ ಸಾಧ್ಯ.
ಸಲಹೆ: ಪಾವತಿ ಮಾಡುವಾಗ UPI ಮೂಲಕ ಎರಡು ಬಾರಿ ಟ್ರಾನ್ಸಕ್ಷನ್ ಆಗದಂತೆ ಜಾಗರೂಕರಾಗಿರಿ.
ಆಯ್ಕೆ ಪ್ರಕ್ರಿಯೆ ಹೇಗೆ ಮಾಡುತ್ತಾರೆ..?
ಆಯ್ಕೆ ಸಾಮಾನ್ಯವಾಗಿ ಮೂರು ಹಂತಗಳಲ್ಲಿ ನಡೆಯುತ್ತದೆ:
- ಲಿಖಿತ ಪರೀಕ್ಷೆ
- ಸ್ಕಿಲ್ ಟೆಸ್ಟ್ / ಟ್ರೇಡ್ ಟೆಸ್ಟ್ (ಅಗತ್ಯವಿದ್ದರೆ)
- ಡಾಕ್ಯುಮೆಂಟ್ ಪರಿಶೀಲನೆ
👉 ಉತ್ತಮ ತಯಾರಿ, ಸಮಯ ನಿರ್ವಹಣೆ ಮತ್ತು ಹಳೆಯ ಪ್ರಶ್ನೆಪತ್ರಿಕೆಗಳ ಅಭ್ಯಾಸ ಬಹಳ ಉಪಯುಕ್ತ.
ನಮ್ಮ ಕೊನೆಯ ಮಾತು:
KMF SHIMUL Recruitment 2025 ರಾಜ್ಯದ ಅನೇಕ ಅಭ್ಯರ್ಥಿಗಳಿಗೆ ಉತ್ತಮ ವೇತನ, ಭದ್ರ ಭವಿಷ್ಯ ಮತ್ತು ಸ್ಥಿರ ಉದ್ಯೋಗ ಪಡೆಯುವ ಅದ್ಭುತ ಹಾಗೂ ಸುವರ್ಣ ಅವಕಾಶ ಎನ್ನಬಹುದು. ವಿವಿಧ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಸಮಾನ ಅವಕಾಶ ಇರುವುದರಿಂದ, ಈ ನೇಮಕಾತಿ ಎಲ್ಲರಿಗೂ ಪ್ರಯೋಜನಕಾರಿ ಅಂತ ಹೇಳುತ್ತಾ ನೀವೇನಾದ್ರೂ ಇಲ್ಲಿವರೆಗೆ ಈ ಒಂದು ಲೇಖನ ಓದಿದ್ದರೆ ಹಾಗೆ ನಿಮಗೆ ಕೆಲವೊಂದಿಷ್ಟು ಪ್ರಶ್ನೆಗಳು ಕಾಡುತ್ತೆ ನಿಮ್ಮ ಪ್ರಶ್ನೆಗಳಿಗೆ ಈ ಕೆಳಗಿನಂತಿದೆ ನೋಡಿ ಉತ್ತರ.
ಪ್ರಮುಖ ಲಿಂಕ್ ಗಳು
| Important Links | Access |
| ಸಹಾಯವಾಣಿ | 9535165947 |
| ಅಧಿಕೃತ ವೆಬ್ಸೈಟ್ | Click Here |
| ಆನ್ಲೈನ್ ಅರ್ಜಿ | Click Here |
FAQs – ಪದೇ ಪದೇ ಕೇಳುವ ಪ್ರಶ್ನೆಗಳು
1️⃣ SHIMUL ನೇಮಕಾತಿ 2025ಕ್ಕೆ ಅರ್ಜಿ ಯಾವಾಗ ಮುಗಿಯುತ್ತದೆ?
ಡಿಸೆಂಬರ್ 14, 2025 ಅರ್ಜಿ ಕೊನೆಯ ದಿನ.
2️⃣ ಯಾರ್ಯಾರು ಅರ್ಜಿ ಹಾಕಬಹುದು?
SSLCರಿಂದ MBAವರೆಗಿನ ವಿದ್ಯಾರ್ಹತೆಯ ಅಭ್ಯರ್ಥಿಗಳು ಹುದ್ದೆಯ ಪ್ರಕಾರ ಅರ್ಜಿ ಹಾಕಬಬಹುದು.
3️⃣ ಪರೀಕ್ಷೆ ಆನ್ಲೈನ್ ಆಗುತ್ತದಾ ಅಥವಾ ಆಫ್ಲೈನ್?
ಸಾಮಾನ್ಯವಾಗಿ ಲಿಖಿತ ಪರೀಕ್ಷೆ ಆಫ್ಲೈನ್ ಆಗುತ್ತದೆ.
4️⃣ ಅನುಭವ ಅಗತ್ಯವೇ?
ಕೆಲವು ಹುದ್ದೆಗಳಿಗೆ ಅಗತ್ಯ ಇದೆ, ಕೆಲವು ಹುದ್ದೆಗಳಿಗೆ ಇಲ್ಲ.
5️⃣ ವಯೋಮಿತಿ ಸಡಲಿಕೆ ಮಾಡಲಾಗಿದೆಯಾ?
ಹೌದು, ಸರ್ಕಾರದ ನಿಯಮಗಳ ಪ್ರಕಾರ ಸಡಿಲಿಕೆ ಇದೆ.
6️⃣ ಎಷ್ಟು ವೇತನ ಸಿಗುತ್ತದೆ?
ವೇತನ ₹34,100 ರಿಂದ ₹1,55,200 ವರೆಗೆ.
7️⃣ ನಾನು ಇತರ ಜಿಲ್ಲೆಯವನಾದರೂ ಅರ್ಜಿ ಹಾಕಬಹುದೇ?
ಹೌದು, ರಾಜ್ಯದ ಯಾವುದೇ ಅಭ್ಯರ್ಥಿ ಅರ್ಜಿ ಹಾಕಬಹುದು.
8️⃣ ದಾಖಲೆಗಳನ್ನು ಅಪ್ಲೋಡ್ ಮಾಡದೆ ಅರ್ಜಿ ಸಲ್ಲಿಸಬಹುದೇ?
ಇಲ್ಲ, ಎಲ್ಲಾ ದಾಖಲಾತಿಗಳು ಕಡ್ಡಾಯ.
9️⃣ ಟ್ರೇಡ್ ಟೆಸ್ಟ್ ಎಲ್ಲ ಹುದ್ದೆಗಳಿಗೆ ಇದೆಯಾ?
ಜೂನಿಯರ್ ಟೆಕ್ನಿಷಿಯನ್ ಹುದ್ದೆಗಳಿಗೆ ಮಾತ್ರ ಅನ್ವಯ.
🔟 ಪರೀಕ್ಷೆ ನಂತರ ಸಂದರ್ಶನ ಇದೆಯಾ?
ಕೆಲವು ಅಧಿಕಾರಿ ಹುದ್ದೆಗಳಿಗೆ ಇರಬಹುದು.