ಬ್ಯಾಂಕ್ ಆಫ್ ಬರೋಡ ನೇಮಕಾತಿ 2026.! ಯಾವುದೇ ಪದವಿ ಪಾಸ್ ಆದವರಿಗೆ ₹64,820 ರೂ. ಸಂಬಳ.!! ಇಂದೇ ಅರ್ಜಿ ಸಲ್ಲಿಸಿ.!!

ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ನಾವು ಬ್ಯಾಂಕ್ ಆಫ್ ಬರೋಡ 419 ಹುದ್ದೆಗಳ ನೇಮಕಾತಿ ಮಾಡ್ತಿದೆ ನಿಮಗೇನಾದರೂ ಯಾವುದೇ ಡಿಗ್ರಿ ಪಾಸ್ ಆದ್ರೆ ನಡೆಯುತ್ತೆ, ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. 

ನೋಡಿ ನೀವೇನಾದರೂ ಜಸ್ಟ್ ಡಿಗ್ರಿ ಪಾಸಾಗಿದ್ರೆ ಹಾಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹುದ್ದೆಯನ್ನು ಪಡೆದುಕೊಳ್ಳಬೇಕಿದ್ದರೆ jobsbindu.in ನಿಮಗಂತಲೇ ಸಹಾಯ ಮಾಡುತ್ತೆ ನಮ್ಮ ಚಾಲಕಣದಲ್ಲಿ ಅಂದರೆ ನಮ್ಮ ವೆಬ್ಸೈಟ್ನಲ್ಲಿ ಇದೇ ತರ ಅಭ್ಯರ್ಥಿಗಳಿಗೆ ಸಹಾಯವಾಗಲೆಂದು ಸರಕಾರಿ ಹುದ್ದೆಗಳ ಕುರಿತು ಅಧಿಕೃತ ಮಾಹಿತಿ ಹಾಗೂ ಪ್ರೈವೇಟ್ ಹುದ್ದೆಗಳ ಕುರಿತು ಅಧಿಕೃತ ಮಾಹಿತಿಯನ್ನು ಒದಗಿಸುತ್ತೆ ನೀವೇನಾದರೂ ಇದೇ ತರ ಮಾಹಿತಿಗಳನ್ನ ಪಡೆದುಕೊಳ್ಳುವುದಾದರೆ ಈ ಲೇಖನವನ್ನ ಕೊನೆವರೆಗೂ ಓದಿ ಹಾಗೆ ಎಲ್ಲರಿಗಿಂತ ಮುಂಚಿತವಾಗಿ ಮಾಹಿತಿ ನಿಮಗೆ ಬೇಕಾಗಿದ್ದರೆ ಈ ಒಂದು ಲೇಖನವನ್ನ ನಿಮ್ಮ ಫ್ರೆಂಡ್ಸ್ ಗಳಿಗೆ ಶೇರ್ ಮಾಡಿ ಹಾಗೆ ನಮ್ಮ ವಾಟ್ಸಪ್ ಗ್ರೂಪ್ ಹಾಗೂ ಟೆಲಿಗ್ರಾಂ ಚಾನೆಲ್ ಆಗಬಹುದು ಏಕೆಂದರೆ ಇಲ್ಲಿಂದ ನಿಮಗೆ ಅಧಿಕೃತ ಮಾಹಿತಿ ಎಲ್ಲರಿಗಿಂತ ಮುಂಚಿತವಾಗಿ ದೊರೆಯುತ್ತೆ.

WhatsApp Group Join Now
Telegram Group Join Now

ಸ್ನೇಹಿತರೆ ನೀವೇನಾದರೂ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉತ್ತಮ ಕರಿಯರ್ ಕಟ್ಟಿಕೊಳ್ಳಬೇಕು ಅನ್ನುವ ಆಸೆ ಹೊಂದಿರುವ ಅಭ್ಯರ್ಥಿಗಳಿಗೆ 2026ರ ಆರಂಭದಲ್ಲಿ ಅದ್ಭುತ ಅವಕಾಶ ಸಿಕ್ಕಿದೆ. ಭಾರತದ ಪ್ರಮುಖ ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳಲ್ಲಿ ಒಂದಾದ Bank of Baroda (BoB) ಸಂಸ್ಥೆ ತನ್ನ MSME Banking Department ನಲ್ಲಿ ವಿವಿಧ ಹುದ್ದೆಗಳಿಗೆ 419 ಅಧಿಕಾರಿಗಳ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದೆ ಹೀಗೆ ನೀವೇನಾದ್ರೂ ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದಾದರೆ ಈ ಒಂದು ಲೇಖನ ನಿಮಗಾಗಿ ಇದೆ.

ಈ ನೇಮಕಾತಿ ಮೂಲಕ ಶಾಶ್ವತ (Regular) ಮತ್ತು ಒಪ್ಪಂದ ಆಧಾರಿತ (Contractual) ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಉತ್ತಮ ಸಂಬಳ, ಭದ್ರ ಉದ್ಯೋಗ, ಸಮಾಜದಲ್ಲಿ ಗೌರವ, ಮತ್ತು ಭವಿಷ್ಯದ ಬೆಳವಣಿಗೆ – ಈ ಎಲ್ಲಾ ಕಾರಣಗಳಿಂದ Bank of Baroda ಉದ್ಯೋಗಾಕಾಂಕ್ಷಿಗಳಿಗೆ ಅತ್ಯಂತ ಆಕರ್ಷಕ ಸಂಸ್ಥೆಯಾಗಿದೆ ಅಂತ ಹೇಳಬಹುದು.

ನೋಡಿ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ನೀವೆಲ್ಲರೂ ಅರ್ಹತೆ, ವಯೋಮಿತಿ, ಸಂಬಳ, ಅರ್ಜಿ ವಿಧಾನ, ಆಯ್ಕೆ ಪ್ರಕ್ರಿಯೆ, ಪ್ರಮುಖ ದಿನಾಂಕಗಳು ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಸರಳ ಕನ್ನಡದಲ್ಲಿ ತಿಳಿದುಕೊಳ್ಳಬಹುದು ಹೀಗೆ ನಿಮಗಂತಲೇ ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿನ ಒದಗಿಸಲಾಗಿದೆ ಮಾಹಿತಿಯನ್ನು ಅರ್ಥ ಮಾಡಿಕೊಳ್ಳಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ.

ಪರಿಚಯ ಮತ್ತು ಹುದ್ದೆಗಳ ಮಾಹಿತಿ:

Bank of Baroda (BoB) ಅನ್ನು 1908ರಲ್ಲಿ ಸ್ಥಾಪಿಸಲಾಗಿದ್ದು, ಇಂದು ಇದು ಭಾರತದ ಅತಿ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ದೇಶದಾದ್ಯಂತ ಸಾವಿರಾರು ಶಾಖೆಗಳು, ಲಕ್ಷಾಂತರ ಗ್ರಾಹಕರು, ಮತ್ತು ಅಂತಾರಾಷ್ಟ್ರೀಯ ಮಟ್ಟದ ಸೇವೆಗಳೊಂದಿಗೆ BoB ತನ್ನ ನಂಬಿಕೆ ಮತ್ತು ವಿಶ್ವಾಸಾರ್ಹತೆಯನ್ನು ವರ್ಷಗಳಿಂದ ಕಟ್ಟಿಕೊಂಡಿದೆ.

ಈ ಬಾರಿ ಬ್ಯಾಂಕ್ ತನ್ನ MSME (Micro, Small & Medium Enterprises) Banking Department ಗೆ ವೃತ್ತಿಪರ ಅಧಿಕಾರಿಗಳನ್ನು ನೇಮಕ ಮಾಡುತ್ತಿದೆ. MSME ವಿಭಾಗವು ಸಣ್ಣ ಮತ್ತು ಮಧ್ಯಮ ಉದ್ಯಮಿಗಳಿಗೆ ಸಾಲ, ಹಣಕಾಸು ಸಲಹೆ, ಮತ್ತು ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುವ ಅತ್ಯಂತ ಪ್ರಮುಖ ವಿಭಾಗವಾಗಿದೆ ಅಂತ ಹೇಳಬಹುದು.

ಈ ನೇಮಕಾತಿಯ ಮುಖ್ಯ ಉದ್ದೇಶಗಳು ಈ ಕೆಳಗಿನಂತಿವೆ:

  • MSME ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುತ್ತದೆ
  • ಸಾಲ ವಿತರಣೆ ಮತ್ತು ಕ್ರೆಡಿಟ್ ವಿಶ್ಲೇಷಣೆಯಲ್ಲಿ ಗುಣಮಟ್ಟ ಹೆಚ್ಚಿಸುವುದು
  • ಬ್ಯಾಂಕಿನ ಬೆಳವಣಿಗೆಯಲ್ಲಿ ಸಹಾಯ ಮಾಡುವ ಅನುಭವ ಹೊಂದಿದ ವೃತ್ತಿಪರರನ್ನು ನೇಮಕ ಮಾಡುವುದು ಬಹಳ ಮುಖ್ಯವಾಗಿರುತ್ತೆ.

ಹುದ್ದೆಗಳ ಸ್ವರೂಪ:

  • Relationship Manager
  • Credit Analyst
  • Sales Officer
  • Assistant Manager, Manager, Senior Manager, AVP, Deputy Manager

ಖಾಲಿ ಹುದ್ದೆಗಳ ಸಂಪೂರ್ಣ ವಿವರ:

ಪ್ರಸ್ತುತ ಈ ನೇಮಕಾತಿಯಲ್ಲಿ ಒಟ್ಟು 419 ಹುದ್ದೆಗಳು ಲಭ್ಯವಿವೆ. ಇವುಗಳಲ್ಲಿ:

  • Regular (ಶಾಶ್ವತ) ಹುದ್ದೆಗಳು – 166
  • Contractual (5 ವರ್ಷಗಳ ಒಪ್ಪಂದ) ಹುದ್ದೆಗಳು – 253

  166 ಹುದ್ದೆಗಳು:

  • Senior Manager – MSME Relationship → 113
  • Senior Manager – Credit Analyst → 19
  • Manager – Credit Analyst → 34

ನೋಡಿ ಈ ಮೇಲ್ಗಡೆ ತಿಳಿಸಿರುವ ಅಂತಹ  ಹುದ್ದೆಗಳು ಶಾಶ್ವತವಾಗಿದ್ದು, ಉತ್ತಮ ವೇತನದ ಜೊತೆಗೆ ಪಿಂಚಣಿ, ಭದ್ರತೆ, ಮತ್ತು ದೀರ್ಘಕಾಲಿಕ ಕರಿಯರ್ ಅವಕಾಶವನ್ನು ಒದಗಿಸುತ್ತವೆ.

 ಒಪ್ಪಂದ ಆಧಾರಿತ ಹುದ್ದೆಗಳು:

  • Assistant Vice President – MSME Relationship → 14
  • Deputy Manager – MSME Relationship → 62
  • Assistant Manager – MSME Sales → 177

ಈ ಹುದ್ದೆಗಳು ನಿಗದಿತ ಅವಧಿಗೆ ಇದ್ದರೂ, ಉತ್ತಮ ಸಂಬಳ ಮತ್ತು ಕಾರ್ಯಕ್ಷಮತೆಯ ಆಧಾರದಲ್ಲಿ ಮುಂದಿನ ಅವಕಾಶಗಳು ಲಭ್ಯವಿರುತ್ತವೆ.

 ಅರ್ಜಿ ಸಲ್ಲಿಸುವ ವಿಧಾನ:

ನೋಡಿ ಪ್ರಸ್ತುತ ಈ ಒಂದು ನೇಮಕಾತಿಗೆ ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು. ಅರ್ಜಿ ಪ್ರಕ್ರಿಯೆ ತುಂಬಾ ಸರಳವಾಗಿದ್ದು, ಸರಿಯಾದ ಕ್ರಮವನ್ನು ಅನುಸರಿಸಿದರೆ ಯಾವುದೇ ತೊಂದರೆ ಆಗುವುದಿಲ್ಲ.

ಅರ್ಜಿ ಸಲ್ಲಿಸುವ ಹಂತಗಳು:

  1. Bank of Baroda ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
  2. “Careers” ವಿಭಾಗಕ್ಕೆ ಹೋಗಿ
  3. “Current Opportunities” ಕ್ಲಿಕ್ ಮಾಡಿ
  4. “Recruitment of Professionals in MSME Banking Department 2026” ಆಯ್ಕೆಮಾಡಿ
  5. “Apply Online” ಕ್ಲಿಕ್ ಮಾಡಿ
  6. ಹೊಸ ನೋಂದಣಿ ಮಾಡಿ (Email ID ಮತ್ತು ಮೊಬೈಲ್ ಸಂಖ್ಯೆ ಮೂಲಕ)
  7. ಅರ್ಜಿ ಫಾರ್ಮ್ ತುಂಬಿ
  8. ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ
  9. ಅರ್ಜಿ ಶುಲ್ಕ ಪಾವತಿಸಿ
  10. ಅಂತಿಮವಾಗಿ ಫಾರ್ಮ್ ಸಲ್ಲಿಸಿ ಮತ್ತು ಪ್ರಿಂಟ್ ಔಟ್ ತೆಗೆದುಕೊಳ್ಳಿ

ಅಗತ್ಯ ದಾಖಲೆಗಳು:

  • ಫೋಟೋ
  • ಸಹಿ
  • ಪದವಿ ಪ್ರಮಾಣ ಪತ್ರ
  • ಅನುಭವ ಪ್ರಮಾಣ ಪತ್ರ
  • ಗುರುತಿನ ಚೀಟಿ (Aadhaar / PAN / Voter ID)

ಅಭ್ಯರ್ಥಿಗಳಿಗೆ ಪ್ರಾಯೋಗಿಕ ಸಲಹೆ: ಅರ್ಜಿ ಸಲ್ಲಿಸುವ ಮೊದಲು ಎಲ್ಲಾ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಸಿದ್ಧವಾಗಿಟ್ಟುಕೊಳ್ಳಿ.

 ಕೆಲಸದ ಸ್ಥಳ:

ಈ ಹುದ್ದೆಗಳ ನಿಯೋಜನೆ ಭಾರತದ ವಿವಿಧ ರಾಜ್ಯಗಳು ಮತ್ತು ನಗರಗಳಲ್ಲಿ ಇರಬಹುದು. ಮುಖ್ಯವಾಗಿ:

  • ಮೆಟ್ರೋ ನಗರಗಳು
  • ಕೈಗಾರಿಕಾ ವಲಯಗಳು
  • MSME ಹೆಚ್ಚು ಇರುವಂತ ಪ್ರದೇಶಗಳು. 

ಬ್ಯಾಂಕಿಂಗ್ ವೃತ್ತಿಯಲ್ಲಿ ವರ್ಗಾವಣೆ ಸಾಮಾನ್ಯವಾಗಿರುವುದರಿಂದ, ಅಭ್ಯರ್ಥಿಗಳು ದೇಶದ ಯಾವುದೇ ಭಾಗದಲ್ಲಿ ಕೆಲಸ ಮಾಡಲು  ಅಭ್ಯರ್ಥಿಗಳು ಸಿದ್ದವಾಗಿರಬೇಕು ಒಂದು ವೇಳೆ ನೀವು ಆಯ್ಕೆಯಾದರೆ.

 ಸಂಬಳ ಮತ್ತು ಸೌಲಭ್ಯಗಳು:

ಪ್ರಸ್ತುತ ಈ ಕೆಳಗಡೆ ಶಾಶ್ವತ ಹುದ್ದೆಗಳು ಹಾಗೆ ಇದರ ಜೊತೆಗೆ ಸಿಗುವಂತಹ ಸೌಲಭ್ಯಗಳ ಕುರಿತು ಮಾಹಿತಿಯನ್ನು ಒದಗಿಸಲಾಗಿದೆ.

ಶಾಶ್ವತ ಹುದ್ದೆಗಳು:

  • MMG Scale II: ಮೂಲ ವೇತನ ₹64,820 + DA, HRA, CCA, ಮತ್ತು ಇತರೆ ಭತ್ಯೆಗಳು
  • MMG Scale III: ಮೂಲ ವೇತನ ₹85,920 + ಎಲ್ಲಾ ಭತ್ಯೆಗಳು

ಇದರ ಜೊತೆಗೆ:

  • ವೈದ್ಯಕೀಯ ಸೌಲಭ್ಯ
  • ಪಿಂಚಣಿ ಯೋಜನೆ
  • Leave Travel Concession
  • ಗೃಹ ಸಾಲ ಮತ್ತು ವಾಹನ ಸಾಲದಲ್ಲಿ ರಿಯಾಯಿತಿ

ಒಪ್ಪಂದ ಆಧಾರಿತ ಹುದ್ದೆಗಳು:

ಇಲ್ಲಿ ಸಂಬಳವು ಅನುಭವ ಮತ್ತು ಅರ್ಹತೆ ಆಧಾರಿತವಾಗಿ  ನಿಗದಿಯಾಗಿರುತ್ತೆ. ಸಾಮಾನ್ಯವಾಗಿ ಫಿಕ್ಸ್ಡ್ ಪೇ + ಪರ್ಫಾರ್ಮೆನ್ಸ್ ಆಧಾರಿತ ವೇರಿಯಬಲ್ ಪೇ ಇರುತ್ತದೆ.

ಒಟ್ಟಾರೆ ಹೇಳುವುದಾದರೆ, ಈ ನೇಮಕಾತಿಯ ವೇತನ ಪ್ಯಾಕೇಜ್ ಬ್ಯಾಂಕಿಂಗ್ ಕ್ಷೇತ್ರದಲ್ಲೇ ಅತ್ಯಂತ ಆಕರ್ಷಕವಾಗಿದೆ ಅಂತ ಹೇಳಬಹುದು.

 ವಯೋಮಿತಿ & ಸಡಿಲಿಕೆ:

ಹುದ್ದೆಗನುಸಾರ ವಯೋಮಿತಿ ವಿಭಿನ್ನವಾಗಿದೆ:

  • Assistant Manager – 22 ರಿಂದ 32 ವರ್ಷ
  • Deputy Manager – 24 ರಿಂದ 34 ವರ್ಷ
  • Manager – 25 ರಿಂದ 35 ವರ್ಷ
  • Senior Manager (Credit) – 28 ರಿಂದ 37 ವರ್ಷ
  • Senior Manager (Relationship) – 30 ರಿಂದ 40 ವರ್ಷ

ವಯೋಮಿತಿ ಸಡಿಲಿಕೆ:

  • SC / ST → 5 ವರ್ಷ
  • OBC → 3 ವರ್ಷ
  • PwD → 10 ವರ್ಷ

ವಿಶೇಷ ಸಲಹೆ: ವಯೋಮಿತಿ ಗರಿಷ್ಠ ವೈಯಮಿತಿಗೆ ಹತ್ತಿರವಾದಾಗ ಅಥವಾ ಹತ್ತಿರ ಇರುವಂತಹ ಅಭ್ಯರ್ಥಿಗಳು ಕೊನೆಯ ದಿನಾಂಕದ ಮೊದಲು ಖಂಡಿತ ಅರ್ಜಿ ಸಲ್ಲಿಸಬೇಕು.

 ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:

  • ಅಧಿಸೂಚನೆ ಬಿಡುಗಡೆ: 06 ಫೆಬ್ರವರಿ 2026
  • ಅರ್ಜಿ ಪ್ರಾರಂಭ: 06 ಫೆಬ್ರವರಿ 2026
  • ಅರ್ಜಿ ಕೊನೆ ದಿನಾಂಕ: 26 ಫೆಬ್ರವರಿ 2026
  • ಪರೀಕ್ಷೆ / ಸಂದರ್ಶನ ದಿನಾಂಕ: ನಂತರ ಘೋಷಣೆ

ಅಭ್ಯರ್ಥಿಗಳು ಕೊನೆಯ ದಿನದ ಒತ್ತಡ ತಪ್ಪಿಸಲು ಮೊದಲೇ ಅರ್ಜಿ ಸಲ್ಲಿಸುವುದು ಉತ್ತಮ.

 ಶೈಕ್ಷಣಿಕ ಅರ್ಹತೆ ಮತ್ತು ಅನುಭವ:

ಶೈಕ್ಷಣಿಕ ಅರ್ಹತೆ:

  • ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ (Graduation)
  • ಉನ್ನತ ಹುದ್ದೆಗಳಿಗೆ MBA / PGDM / CA / CMA / CFA ಇದ್ದರೆ ಹೆಚ್ಚಿನ ಆದ್ಯತೆ

ಏನೆಲ್ಲಾ ಅನುಭವ ಇರಬೇಕು:

  • Assistant Manager – ಕನಿಷ್ಠ 2 ವರ್ಷ Sales ಅನುಭವ
  • Deputy Manager – 3 ವರ್ಷ Banking / Asset Sales
  • Manager – 3 ವರ್ಷ Credit Processing
  • Senior Manager – 6 ರಿಂದ 8 ವರ್ಷ Banking ಅನುಭವ

ಪ್ರಾಯೋಗಿಕ ಸಲಹೆ: ನಿಮ್ಮ ಅನುಭವವನ್ನು ಸ್ಪಷ್ಟವಾಗಿ Resume ನಲ್ಲಿ ವಿವರಿಸಿ, ಇದು ಶಾರ್ಟ್‌ಲಿಸ್ಟಿಂಗ್ ಹಂತದಲ್ಲಿ ಬಹಳ ಸಹಾಯ ಮಾಡುತ್ತದೆ.

 ಅರ್ಜಿ ಶುಲ್ಕ ಎಷ್ಟಿರುತ್ತೆ.?

  • General / OBC / EWS → ₹850
  • SC / ST / PwD / ಮಹಿಳಾ ಅಭ್ಯರ್ಥಿಗಳು → ₹175

ಪಾವತಿ ವಿಧಾನ: Debit Card, Credit Card, Net Banking, UPI ಬೆಸ್ಟ್ ಆಪ್ಷನ್.

ಸಲಹೆ: ಪಾವತಿ ಮಾಡುವಾಗ ಇಂಟರ್ನೆಟ್ ಸಂಪರ್ಕ ಸ್ಥಿರವಾಗಿರಲಿ.

 ಆಯ್ಕೆ ಪ್ರಕ್ರಿಯೆ:

ಈ ನೇಮಕಾತಿಯ ಆಯ್ಕೆ ಪ್ರಕ್ರಿಯೆ ಬಹು ಹಂತಗಳಲ್ಲಿ ನಡೆಯುತ್ತದೆ:

  1. Shortlisting – ಅರ್ಹತೆ ಮತ್ತು ಅನುಭವದ ಆಧಾರದಲ್ಲಿ
  2. Online Test (ಅಗತ್ಯವಿದ್ದಲ್ಲಿ)
  3. Psychometric Test
  4. Personal Interview

ಅಂತಿಮ ಆಯ್ಕೆ ಸಂದರ್ಶನದ ಸಾಧನೆ ಮತ್ತು ಒಟ್ಟು ಅಂಕಗಳ ಆಧಾರದಲ್ಲಿ ನಡೆಯುತ್ತದೆ.

ತಯಾರಿ ಸಲಹೆಗಳು:

  • ಬ್ಯಾಂಕಿಂಗ್ ಮತ್ತು MSME ವಿಷಯಗಳ ಮೂಲಭೂತ ಜ್ಞಾನ
  • Current Affairs
  • Credit Analysis Basics
  • Communication Skills

ಪ್ರಮುಖ ಲಿಂಕ್ ಗಳು

Important LinksAccess
ಅಧಿಸೂಚನೆ PDF Click Here
ಅಧಿಕೃತ ವೆಬ್ಸೈಟ್ Click Here
ಆನ್ಲೈನ್ ಅರ್ಜಿClick Here

ನಮ್ಮ ಕೊನೆಯ ಮಾತು:

Bank of Baroda Officers Recruitment 2026 ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉತ್ತಮ ಭವಿಷ್ಯ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಅದ್ಭುತ ಅವಕಾಶ ಅಂತ ಹೇಳಬಹುದು ಏಕೆಂದರೆ ಇಲ್ಲಿ ನಿಮಗೆ  ಉತ್ತಮ ಸಂಬಳ, ಭದ್ರತೆ, ಗೌರವ, ಮತ್ತು ಕರಿಯರ್ ಗ್ರೋತ್ – ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ಅರ್ಹ ಅಭ್ಯರ್ಥಿಗಳು ಈ ಅವಕಾಶವನ್ನು ಕೈ ತಪ್ಪಿಸಿಕೊಳ್ಳದೇ ಅರ್ಜಿ ಸಲ್ಲಿಸಬೇಕು ಕೊನೆಯ ದಿನಾಂಕದೊಳಗೆ.

 FAQ:

1. ಫ್ರೆಶರ್‌ಗಳಿಗೆ ಅವಕಾಶ ಇದೆಯೇ?
  ಇಲ್ಲ, ಕನಿಷ್ಠ ಅನುಭವ ಕಡ್ಡಾಯ.

2. ಪರೀಕ್ಷೆ ಕಡ್ಡಾಯವೇ?
  ಅರ್ಜಿದಾರರ ಸಂಖ್ಯೆ ಜಾಸ್ತಿ ಇದ್ದರೆ ಮಾತ್ರ.

3. ಕೆಲಸ ಶಾಶ್ವತವೇ?
Regular ಹುದ್ದೆಗಳು ಶಾಶ್ವತ, Contractual ಹುದ್ದೆಗಳು 5 ವರ್ಷ.

4. ಸಂಬಳ ಎಷ್ಟು?
  ₹64,820 ರಿಂದ ₹85,920 + ಭತ್ಯೆಗಳು.

5. ಮಹಿಳೆಯರಿಗೆ ಅವಕಾಶ ಇದೆಯೇ?
  ಖಂಡಿತ, ಸಮಾನ ಅವಕಾಶ.

6. ಅರ್ಜಿ ಶುಲ್ಕ ಮರುಪಾವತಿ ಇದೆಯೇ?
  ಇಲ್ಲ.

7. ಒಂದಕ್ಕಿಂತ ಹೆಚ್ಚು ಹುದ್ದೆಗೆ ಅರ್ಜಿ ಹಾಕಬಹುದೇ?
ನಿಯಮಾನುಸಾರ ಒಂದೇ ಹುದ್ದೆಗೆ.

8. ಪರೀಕ್ಷೆಯ ಸಿಲೆಬಸ್ ಏನು?
Reasoning, English, Quant, Professional Knowledge.

9. ಸಂದರ್ಶನ ಯಾವ ಭಾಷೆಯಲ್ಲಿ?
ಮುಖ್ಯವಾಗಿ ಇಂಗ್ಲಿಷ್.

10. ಇದು ಉತ್ತಮ ಕರಿಯರ್ ಅವಕಾಶವೇ?
ಹೌದು, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅತ್ಯುತ್ತಮ ಅವಕಾಶಗಳಲ್ಲಿ ಒಂದು.

Leave a Comment