ಪಂಜಾಬ್ ನ್ಯಾಷನಲ್ ಬ್ಯಾಂಕ್ 5138 ಬೃಹತ್ ಹುದ್ದೆಗಳ ನೇಮಕಾತಿ 2026.! 15,000 ರೂ. ಸಂಬಳ ಇಂದೆ ಅರ್ಜಿ ಸಲ್ಲಿಸಿ.!!

ಭಾರತದಲ್ಲಿ ಸರ್ಕಾರಿ ಬ್ಯಾಂಕ್ ಉದ್ಯೋಗ ಎಂದರೆ ಅದು ಕೇವಲ ಕೆಲಸವಲ್ಲ  ಅದು ಭದ್ರತೆ, ಗೌರವ ಮತ್ತು ಉತ್ತಮ ಭವಿಷ್ಯಕ್ಕೆ ದಾರಿ. ಇಂತಹ ಅವಕಾಶವನ್ನು ಹುಡುಕುತ್ತಿರುವ ಯುವಕರಿಗೆ ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) 2026ನೇ ಸಾಲಿನ ಅಪ್ರೆಂಟಿಸ್ ನೇಮಕಾತಿ ಅಧಿಸೂಚನೆ ಮೂಲಕ ಭರ್ಜರಿ ನೇಮಕಾತಿ ಮಾಡಲು ಮುಂದಾಗಿದೆ ದಯವಿಟ್ಟು ಗಮನಿಸಿ ಇಲ್ಲಿ ನೋಡಿ ಒಂದು ಹುದ್ದೆಯಲ್ಲ ಎರಡು ಒಂದೇ ಅಲ್ಲ ಒಟ್ಟು ಐದು ಸಾವಿರದ ಮುನ್ನೂರ ಮೂವತ್ತೆಂಟು ಹುದ್ದೆಗಳು ಖಾಲಿ ಇಂದು ಎಲ್ಲಾ 5138 ಹುದ್ದೆಗಳ ನೇಮಕಾತಿ ನಡೆಯುತ್ತಿದೆ. 

ಈ ನೇಮಕಾತಿಯಲ್ಲಿ ಒಟ್ಟು 5,138 ಅಪ್ರೆಂಟಿಸ್ ಹುದ್ದೆಗಳು ಲಭ್ಯವಿದ್ದು, ಭಾರತದ ಎಲ್ಲಾ ರಾಜ್ಯಗಳ ಪದವಿಧರ ಅಭ್ಯರ್ಥಿಗಳಿಗೆ ಇದು ದೊಡ್ಡ ಅವಕಾಶವಾಗಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಪ್ರಾಯೋಗಿಕ ಅನುಭವ ಪಡೆದುಕೊಳ್ಳಲು, ಉತ್ತಮ ವೃತ್ತಿ ಆರಂಭಕ್ಕೆ ಇದು ಅತ್ಯುತ್ತಮ ವೇದಿಕೆ ಅಂತ ಹೇಳಬಹುದು ಏಕೆಂದರೆ ನೋಡಿ ಬೃಹತ್ ಪ್ರಮಾಣದಲ್ಲಿ ಹುದ್ದೆಗಳ ನೇಮಕಾತಿ ನಡೆಯುತ್ತಿದೆ ಇಂಥ ಸಮಯದಲ್ಲಿ ಅಭ್ಯರ್ಥಿಗಳು ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾಗಬಹುದು.

WhatsApp Group Join Now
Telegram Group Join Now

ನೋಡಿ ಪ್ರಸ್ತುತ ಇಂದಿನ ಲೇಖನದಲ್ಲಿ ನೀವು PNB Apprentice Recruitment 2026 ಕುರಿತು ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಬರೋಣ ಉದಾಹರಣೆಗೆ ತಿಳಿಸುವುದಾದರೆ ನೋಡಿ ಸಾಮಾನ್ಯವಾಗಿ ನಿಮ್ಮ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮುಂದಾದಾಗ ಇಂತಹ ಪ್ರಶ್ನೆಗಳು ಹುಟ್ಟುಕೊಳ್ಳುತ್ತೆ ಉದಾಹರಣೆಗೆ ತಿಳಿಸುವುದಾದರೆ ನಮ್ಮ ಶೈಕ್ಷಣಿಕ ಅರ್ಹತೆ ಏನಾಗಿರಬೇಕು..? ಪ್ರತಿ ತಿಂಗಳ ವೇತನ ಎಷ್ಟು.? ಅರ್ಜಿ ಸಲ್ಲಿಸುವ ಪ್ರಾರಂಭ ದಿನಾಂಕ ಹಾಗೂ ಕೊನೆ ದಿನಾಂಕ ಯಾವುದು..?

ನೋಡಿ ಈ ಮೇಲ್ಗಡೆ ಕಳಿಸಿರುವ ಹಾಗೆ ಒಂದಲ್ಲ ಎರಡಲ್ಲ ಹತ್ತು ಹಲವಾರು ತರಹದ ಪ್ರಶ್ನೆಗಳು ನಮ್ಮಣ್ಣ ಕಾಡುತ್ತಲೇ ಇರುತ್ತೆ ನಿಮ್ಮೆಲ್ಲ ಈ ಮೇಲಿನ ಪ್ರಶ್ನೆಗಳಿಗೆ ನಿಮಗಂತಲೇ ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಿದ್ದೇವೆ ಈ ಮಾಹಿತಿಯಂತೆ ನೀವು ಮಾಡಿದೆ ಆಗಲೇ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು ಸಂಪೂರ್ಣ ಸಹಾಯವಾಗುತ್ತೆ.

 ನೇಮಕಾತಿ ವಿವರಗಳು:

ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಭಾರತದಲ್ಲಿ ಅತಿ ದೊಡ್ಡ ಮತ್ತು ವಿಶ್ವಾಸಾರ್ಹ ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಒಂದಾಗಿದೆ. ಈ ಬ್ಯಾಂಕ್ ಕುರಿತು ತಿಳಿದುಕೊಳ್ಳುವುದಾದರೆ ನೋಡಿ ಪಂಜಾಬ್ ನ್ಯಾಷನಲ್ ಬ್ಯಾಂಕ್ 1894ರಲ್ಲಿ ಸ್ಥಾಪನೆಯಾದ ಈ ಬ್ಯಾಂಕ್, ಇಂದಿಗೂ ಕೋಟ್ಯಾಂತರ ಗ್ರಾಹಕರಿಗೆ ಬ್ಯಾಂಕಿಂಗ್ ಸೇವೆಗಳನ್ನು ನೀಡುತ್ತಾ ಬಂದಿದೆ.

PNB ಯಲ್ಲಿ ಉದ್ಯೋಗ ಪಡೆಯುವುದು ಎಂದರೆ:

  • ಉತ್ತಮ ಕೆಲಸದ ವಾತಾವರಣ
  • ನಿರಂತರ ಕಲಿಕೆಯ ಅವಕಾಶ
  • ಸ್ಥಿರ ಆದಾಯ
  • ವೃತ್ತಿ ಬೆಳವಣಿಗೆ
  • ಗೌರವಯುತ ಸರ್ಕಾರಿ ಉದ್ಯೋಗ

ಇಂತಹ ಪ್ರತಿಷ್ಠಿತ ಸಂಸ್ಥೆಯಲ್ಲಿ ಅಪ್ರೆಂಟಿಸ್ ತರಬೇತಿ ಪಡೆಯುವುದರಿಂದ ಯುವಕರಿಗೆ ಬ್ಯಾಂಕಿಂಗ್ ಕ್ಷೇತ್ರದ ಪ್ರಾಯೋಗಿಕ ಜ್ಞಾನ, ಗ್ರಾಹಕ ಸೇವೆ, ಹಣಕಾಸು ವ್ಯವಸ್ಥೆ ಮತ್ತು ಕಚೇರಿ ನಿರ್ವಹಣೆಯ ಸಂಪೂರ್ಣ ಅರಿವು ದೊರೆತಂತಾಗುತ್ತದೆ ಎಂದು ಹೇಳಬಹುದು ನೋಡಿ ಮೊದಲು ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಇದರ ಅನುಭವ ಏನು ಅಂತ ಗೊತ್ತಾಗುತ್ತೆ.

ಈ ನೇಮಕಾತಿಯ ಉದ್ದೇಶ:
ಯುವ ಪದವಿಧರರಿಗೆ 1 ವರ್ಷದ ತರಬೇತಿ ನೀಡಿ, ಭವಿಷ್ಯದಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉತ್ತಮ ಉದ್ಯೋಗಾವಕಾಶಗಳನ್ನು ಪಡೆಯಲು ಸಿದ್ಧಗೊಳಿಸುವುದು ಇದರ ಮುಖ್ಯ ಉದ್ದೇಶ ವಾಗಿರುತ್ತೆ ಹಾಗೆ ಇಲ್ಲಿ ಆಯ್ಕೆ ಆಗಿರುವಂತಹ ಅಭ್ಯರ್ಥಿಗಳಿಗೆ ಸರ್ಟಿಫಿಕೇಟ್ ಸಹ ನೀಡುತ್ತಾರೆ ಒಂದು ವರ್ಷ ಮುಗಿದ ತಕ್ಷಣ ಅಂದರೆ ತರಬೇತಿ ಮುಗಿದ ತಕ್ಷಣ. 

 ಹುದ್ದೆಗಳ ವಿವರ:

ಈ ಬಾರಿ PNB ಸಂಸ್ಥೆ ಒಟ್ಟು 5,138 ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದ್ದು ಪ್ರಸ್ತುತ ಇತ್ತೀಚಿನ ವರ್ಷಗಳಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಅತಿ ದೊಡ್ಡ ಪ್ರಮಾಣದಲ್ಲಿ  ಅಪ್ರೆಂಟಿಸ್ ಹುದ್ದೆಗಳ ನೇಮಕಾತಿ ಮಾಡಲು ಇದೀಗ ಒಂದಾಗಿದೆ.

ವರ್ಗವಾರು ಹುದ್ದೆಗಳ ಹಂಚಿಕೆ:

ನೋಡಿ ಈ ಕೆಳಗಡೆ ವರ್ಗವಾದ ಹುದ್ದೆಗಳ ಹಂಚಿಕೆಯ ಕುರಿತು ಸಂಪೂರ್ಣ ಮಾಹಿತಿಯನ್ನು ಒದಗಿಸಲಾಗಿದೆ ಅರ್ಜಿ ಸಲ್ಲಿಸುವ ಮುನ್ನ ಇದರ ಕುರಿತು ಮಾಹಿತಿ ಅರಿತುಕೊಳ್ಳಿ.

  • ಸಾಮಾನ್ಯ ವರ್ಗ (UR): 2,383
  • OBC: 1,110
  • SC: 887
  • ST: 294
  • EWS: 464

ಈ ಹುದ್ದೆಗಳು ಭಾರತದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹಂಚಿಕೆಯಾಗಿದೆ. ಪ್ರತಿ ರಾಜ್ಯಕ್ಕೆ ಪ್ರತ್ಯೇಕವಾಗಿ ಹುದ್ದೆಗಳ ವಿವರ ಅಧಿಸೂಚನೆಯಲ್ಲಿ ನೀಡಲಾಗಿದೆ.

 ಅರ್ಜಿ ಸಲ್ಲಿಸುವ ವಿಧಾನ:

ಈ ಕೆಳಗಡೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಹಂತ ಹಂತವಾಗಿ ಅರ್ಜಿ ಸಲ್ಲಿಸುವ ಕುರಿತು ಮಾಹಿತಿ ಇದೆ ಗಮನಿಸಿ.

PNB Apprentice Recruitment 2026 ಗೆ ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದು. ಪ್ರಕ್ರಿಯೆ ತುಂಬಾ ಸರಳವಾಗಿದೆ.

ಅರ್ಜಿ ಸಲ್ಲಿಸುವ ಹಂತಗಳು:

  1. PNB ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
  2. “Recruitments / Careers” ವಿಭಾಗ ತೆರೆಯಿರಿ
  3. “Engagement of Apprentices 2026” ಲಿಂಕ್ ಕ್ಲಿಕ್ ಮಾಡಿ
  4. ಹೊಸ ನೋಂದಣಿ ಮಾಡಿ
  5. ವೈಯಕ್ತಿಕ ವಿವರಗಳು ಭರ್ತಿ ಮಾಡಿ
  6. ಶೈಕ್ಷಣಿಕ ವಿವರಗಳನ್ನು ನಮೂದಿಸಿ
  7. ಫೋಟೋ ಮತ್ತು ಸಹಿ ಅಪ್‌ಲೋಡ್ ಮಾಡಿ
  8. ಅರ್ಜಿ ಶುಲ್ಕ ಪಾವತಿಸಿ
  9. ಫಾರ್ಮ್ ಸಲ್ಲಿಸಿ ಪ್ರಿಂಟ್ ತೆಗೆದುಕೊಳ್ಳಿ

ಅಗತ್ಯ ದಾಖಲೆಗಳು:

  • ಪಾಸ್‌ಪೋರ್ಟ್ ಸೈಜ್ ಫೋಟೋ
  • ಸಹಿ
  • ಪದವಿ ಪ್ರಮಾಣಪತ್ರ
  • ಮಾರ್ಕ್ಸ್ ಕಾರ್ಡ್
  • ಆಧಾರ್ / ಐಡಿ ಪ್ರೂಫ್
  • ಜಾತಿ ಪ್ರಮಾಣಪತ್ರ (ಅಗತ್ಯವಿದ್ದಲ್ಲಿ)

👉 ಅಭ್ಯರ್ಥಿಗಳಿಗೆಉಪಯುಕ್ತ ಸಲಹೆ:
ಏನೆಂದರೆ ನೋಡಿ ಅರ್ಜಿಯನ್ನು ಸಲ್ಲಿಸುವಾಗ ಇಂಟರ್ನೆಟ್ ಸಂಪರ್ಕ ಉತ್ತಮವಾಗಿರುವ ಸಮಯದಲ್ಲಿ ಮಾಡುವುದು ಉತ್ತಮ. ಅಂತಿಮ ದಿನಾಂಕದಂದು ಸರ್ವರ್ ಲೋಡ್ ಹೆಚ್ಚಾಗುವ ಕಾರಣ ತೊಂದರೆ ಉಂಟಾಗಬಹುದು.

 ಉದ್ಯೋಗ ಸ್ಥಳ:

ಅಭ್ಯರ್ಥಿಗಳನ್ನು ತಾವು ಅರ್ಜಿ ಸಲ್ಲಿಸಿದ ರಾಜ್ಯದಲ್ಲಿಯೇ ತರಬೇತಿಗೆ ನಿಯೋಜಿಸಲಾಗುತ್ತದೆ. ಅಂದರೆ ನೀವು ಎಲ್ಲಿ ಅರ್ಜಿ ಸಲ್ಲಿಸುತ್ತೀರೋ ಅಂದರೆ ಯಾವ ರಾಜದಿಂದ ಅರ್ಜಿ ಸಲ್ಲಿಸುತ್ತಿದ್ದೀರೋ ಅದೇ ರಾಜ್ಯದಲ್ಲಿ ನಿಮಗೆ ಹುದ್ದೆಗಳು ಸಿಗುತ್ತೆ. ಹಾಗೆ ಅಲ್ಲೇ ಸಹ ನಿಮಗೆ ಒಂದು ಒಳ್ಳೆ ರೀತಿಯ ಸಂಬಳ ಸಿಗುತ್ತದೆ.

  • ಗ್ರಾಮೀಣ
  • ಅರ್ಧ ನಗರ
  • ನಗರ
  • ಮೆಟ್ರೋ ಶಾಖೆಗಳು

ಈ ನಾಲ್ಕು ವಿಭಾಗಗಳಲ್ಲಿ ನಿಮ್ಮ ಪೋಸ್ಟಿಂಗ್ ಆಗಬಹುದು.

ಅಭ್ಯರ್ಥಿಗಳಿಗೆ ಜೀವನಶೈಲಿ ಹೇಗಿರುತ್ತದೆ?
ನಗರ ಮತ್ತು ಮೆಟ್ರೋ ಪ್ರದೇಶಗಳಲ್ಲಿ ಕೆಲಸದ ಒತ್ತಡ ಹೆಚ್ಚು ಆದರೆ ಕಲಿಕೆಯ ಅವಕಾಶವೂ ಅಧಿಕ. ಗ್ರಾಮೀಣ ಪ್ರದೇಶಗಳಲ್ಲಿ ಕೆಲಸದ ಒತ್ತಡ ಕಡಿಮೆ ಆದರೆ ವಿವಿಧ ಸೇವೆಗಳ ಅನುಭವ ಪಡೆಯಬಹುದು.

 ಸಂಬಳ ಮತ್ತು ಸ್ಟೈಪೆಂಡ:

PNB ಅಪ್ರೆಂಟಿಸ್ ತರಬೇತಿಯ ಅವಧಿ 1 ವರ್ಷ. ಈ ಅವಧಿಯಲ್ಲಿ ಅಭ್ಯರ್ಥಿಗಳಿಗೆ ಮಾಸಿಕ ಸ್ಟೈಪೆಂಡ್ ನೀಡಲಾಗುತ್ತದೆ ನಿಮ್ಮ ಸ್ವಸ್ತಿಪಡ್ ಅಂದರೆ ತಿಂಗಳಿಗೆ ಇಂತಿಷ್ಟು ಸಂಬಳ ಅಂತ ಟ್ರೇನಿಂಗ ಸಮಯದಲ್ಲಿ ನೀಡುತ್ತಾರೆ ಗಮನಿಸಿ. ಈ ಒಂದು ಸ್ಟೇಫಂಡ್ ಕುರಿತು ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಲಾಗಿದೆ ಗಮನಿಸಿ 

  • ಗ್ರಾಮೀಣ ಪ್ರದೇಶ: ₹10,000
  • ಅರ್ಧ ನಗರ: ₹12,000
  • ನಗರ / ಮೆಟ್ರೋ: ₹15,000

👉 ಅಭ್ಯರ್ಥಿಗಳೇ ಸಂಬಳದ ಲಾಭ:
ಇದು ಶಾಶ್ವತ ಉದ್ಯೋಗ ಅಲ್ಲದಿದ್ದರೂ, ಬ್ಯಾಂಕಿಂಗ್ ಅನುಭವ + ಆದಾಯ + ಸರ್ಕಾರಿ ಪ್ರಮಾಣಪತ್ರ ನಿಮ್ಮ ಭವಿಷ್ಯದ ನೇಮಕಾತಿಗಳಿಗೆ ಬಹಳ ಉಪಯುಕ್ತ.

 ವಯೋಮಿತಿ:

ಕನಿಷ್ಠ ವಯಸ್ಸು: 20 ವರ್ಷ
ಗರಿಷ್ಠ ವಯಸ್ಸು: 28 ವರ್ಷ

ವಯೋ ಸಡಿಲಿಕೆ:

  • SC / ST: 5 ವರ್ಷ
  • OBC: 3 ವರ್ಷ
  • PwBD: ಸರ್ಕಾರದ ನಿಯಮದಂತೆ

👉 ಸಲಹೆ:
ನೀವು ವಯೋಮಿತಿಗೆ ಹತ್ತಿರವಾಗಿದ್ದರೆ, ಕೊನೆಯ ದಿನಾಂಕಕ್ಕೆ ಕಾಯದೆ ತಕ್ಷಣ ಅರ್ಜಿ ಸಲ್ಲಿಸುವುದು ಉತ್ತಮ ಎಂದು ಹೇಳಬಹುದು.

 ಮುಖ್ಯ ದಿನಾಂಕಗಳು,:

  • ಅಧಿಸೂಚನೆ ಬಿಡುಗಡೆ: ಫೆಬ್ರವರಿ 6, 2026
  • ಅರ್ಜಿ ಪ್ರಾರಂಭ: ಫೆಬ್ರವರಿ 8, 2026
  • ಕೊನೆಯ ದಿನಾಂಕ: ಫೆಬ್ರವರಿ 24, 2026
  • ಆನ್‌ಲೈನ್ ಪರೀಕ್ಷೆ: ಮಾರ್ಚ್ 1ನೇ ವಾರ (ಅಂದಾಜು)

 ಶೈಕ್ಷಣಿಕ ಅರ್ಹತೆ ಮತ್ತು ಅನುಭವ:

ಅಗತ್ಯ ಅರ್ಹತೆ:

  • ಅಭಿವೃದ್ಧಿಗಳಿಗೆ ಗಮನಿಸಿ ನೀವು ಯಾವುದೇ ವಿಷಯದಲ್ಲಿ ಪದವಿ (Graduation) ಪಡೆದುಕೊಂಡಿರಬೇಕು.
  • ಫಲಿತಾಂಶ ದಿನಾಂಕ: ಡಿಸೆಂಬರ್ 31, 2025 ಅಥವಾ ಅದಕ್ಕೂ ಮೊದಲು ಪ್ರಕಟವಾಗಿರಬೇಕು

ಸ್ಥಳೀಯ ಭಾಷಾ ಪ್ರಾವೀಣ್ಯ:

ನೀವು ಅರ್ಜಿ ಸಲ್ಲಿಸುವ ರಾಜ್ಯದ ಸ್ಥಳೀಯ ಭಾಷೆಯನ್ನು ಓದಲು, ಬರೆಯಲು ಮತ್ತು ಮಾತನಾಡಲು ಬಲ್ಲವರಾಗಿರಬೇಕು.

👉 ಪ್ರೇರಣಾತ್ಮಕ ಮಾತು:
ನಿಮ್ಮ ಪದವಿಯಲ್ಲಿ ಕಡಿಮೆ ಅಂಕಗಳಿದ್ದರೂ ಚಿಂತಿಸಬೇಡಿ. ಉತ್ತಮ ತಯಾರಿಯಿಂದ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಬಹುದು.

 ಅರ್ಜಿ ಶುಲ್ಕ ಎಷ್ಟಿರುತ್ತದೆ:

  • General / OBC / EWS: ₹944
  • SC / ST / ಮಹಿಳೆಯರು: ₹708
  • PwBD: ₹472

ಪಾವತಿ ವಿಧಾನ:
ಡೆಬಿಟ್ ಕಾರ್ಡ್ / ಕ್ರೆಡಿಟ್ ಕಾರ್ಡ್ / UPI / ನೆಟ್ ಬ್ಯಾಂಕಿಂಗ್

👉 ಸಲಹೆ:
ಪಾವತಿ ನಂತರ ರಸೀದಿ ಉಳಿಸಿಕೊಳ್ಳಿ.

 ಆಯ್ಕೆ ಪ್ರಕ್ರಿಯೆ:

PNB Apprentice Recruitment 2026 ಆಯ್ಕೆ ಪ್ರಕ್ರಿಯೆ ಪ್ರಮುಖವಾಗಿ 2 ಹಂತಗಳಲ್ಲಿ ನಡೆಯುತ್ತದೆ:

ಹಂತ 1 – ಆನ್‌ಲೈನ್ ಲಿಖಿತ ಪರೀಕ್ಷೆ

  • ಅವಧಿ: 60 ನಿಮಿಷ
  • ಪ್ರಶ್ನೆಗಳು: 100
  • ಅಂಕಗಳು: 100

ವಿಷಯ ವಿಭಾಗಗಳು:

  • ಸಾಮಾನ್ಯ ಜ್ಞಾನ / ಹಣಕಾಸು ಅರಿವು – 25
  • ಇಂಗ್ಲಿಷ್ – 25
  • ಗಣಿತ ಮತ್ತು ರೀಸನಿಂಗ್ – 25
  • ಕಂಪ್ಯೂಟರ್ ಜ್ಞಾನ – 25

ಹಂತ 2 – ಸ್ಥಳೀಯ ಭಾಷಾ ಪರೀಕ್ಷೆ + ದಾಖಲೆ ಪರಿಶೀಲನೆ

👉 ತಯಾರಿ ಸಲಹೆಗಳು:

  • ದಿನಕ್ಕೆ ಕನಿಷ್ಠ 3–4 ಗಂಟೆ ಅಧ್ಯಯನ
  • ಮಾದರಿ ಪ್ರಶ್ನೆ ಪತ್ರಿಕೆ ಅಭ್ಯಾಸ
  • ಬ್ಯಾಂಕಿಂಗ್ ಅವೇರ್‌ನೆಸ್ ದಿನನಿತ್ಯ ಓದು
  • ಸಮಯ ನಿರ್ವಹಣೆಯ ಅಭ್ಯಾಸ

ನಮ್ಮ ಕೊನೆಯ ಮಾತು:

PNB Apprentice Recruitment 2026 ಸದ್ಯದ ಪರಿಸ್ಥಿತಿಯಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಅವರಪ್ಪ ಹೆಚ್ಚು ಹುದ್ದೆಗಳ ನೇಮಕಾತಿ ಮಾಡುತ್ತಿದೆ ಇದರ ಕುರಿತು ಈಗಾಗಲೇ ಮಾಹಿತಿಯನ್ನು ಓದಿದ್ದೀರಿ ಈ ಮೇಲ್ಗಡೆ ಯಾವುದೇ ತರಹದ ಪ್ರಶ್ನೆಗಳಿದ್ದಲ್ಲಿ ಕಮೆಂಟ್ ಮಾಡಿ ನಾವಿದ್ದೇವೆ ಹಾಗೆ ಈ ಒಂದು ಮಾಹಿತಿಯನ್ನು ನಿಮ್ಮ ಫ್ರೆಂಡ್ಸ್ ಗಳಿಗೆ ಶೇರ್ ಮಾಡಿ.

ನೋಡಿ ಇಂದಿನ ಈ ಒಂದು ಮಾಹಿತಿ ನಿಮಗೆ ನಿಜವಾಗಿಯೂ ಸಹ ವಾಗಿದ್ದರೆ ಮೊದಲು ನಿಮ್ಮ ಫ್ರೆಂಡ್ಸ್ ಗಳಿಗೆ ಶೇರ್ ಮಾಡಿ ಅವರು ಕೂಡ ಈ ಮಾಹಿತಿಯನ್ನು ಓದಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು ಹಾಗೆ ಅರ್ಜಿ ಸಲ್ಲಿಸಲು ಸಂಪೂರ್ಣ ವಿವರಣೆ ಕೂಡ ನೀಡಲಾಗಿದೆ ವಿಡಿಯೋನಲ್ಲಿ.

ಅರ್ಜಿ ಸಲ್ಲಿಸುವ ಪ್ರಮುಖ ಲಿಂಕ್ ಗಳು

Important LinksAccess
ಅಧಿಸೂಚನೆ PDF 1
2
Click Here
Click here 
ಅಧಿಕೃತ ವೆಬ್ಸೈಟ್ Click Here
ಆನ್ಲೈನ್ ಅರ್ಜಿClick Here 

FAQ:

1. PNB Apprentice Recruitment 2026 ಗೆ ಯಾರು ಅರ್ಜಿ ಹಾಕಬಹುದು?

ಯಾವುದೇ ವಿಷಯದಲ್ಲಿ ಪದವಿ ಪಡೆದ 20–28 ವರ್ಷದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

2. ಈ ಹುದ್ದೆ ಶಾಶ್ವತವೇ?

ಇಲ್ಲ. ಇದು 1 ವರ್ಷದ ತರಬೇತಿ (Apprenticeship) ಮಾತ್ರ.

3. ಸಂಬಳ ಎಷ್ಟು?

ತಿಂಗಳಿಗೆ ₹10,000 ರಿಂದ ₹15,000 ವರೆಗೆ.

4. ಪರೀಕ್ಷೆ ಯಾವ ಭಾಷೆಯಲ್ಲಿ ಇರುತ್ತದೆ?

ಹಿಂದಿ ಮತ್ತು ಇಂಗ್ಲಿಷ್.

5. ಸ್ಥಳೀಯ ಭಾಷಾ ಪರೀಕ್ಷೆ ಕಡ್ಡಾಯವೇ?

ಹೌದು. ನೀವು ಅರ್ಜಿ ಸಲ್ಲಿಸಿದ ರಾಜ್ಯದ ಭಾಷೆಯಲ್ಲಿ ನೈಪುಣ್ಯ ಇರಬೇಕು.

6. ಪದವಿ ಫಲಿತಾಂಶ ಯಾವ ದಿನಾಂಕದೊಳಗೆ ಬೇಕು?

ಡಿಸೆಂಬರ್ 31, 2025 ಒಳಗಾಗಿ ಪ್ರಕಟವಾಗಿರಬೇಕು.

7. ಪರೀಕ್ಷೆಗೆ ನೆಗೆಟಿವ್ ಮಾರ್ಕಿಂಗ್ ಇದೆಯೇ?

ಅಧಿಸೂಚನೆಯಲ್ಲಿ ನೆಗೆಟಿವ್ ಮಾರ್ಕಿಂಗ್ ಬಗ್ಗೆ ಸ್ಪಷ್ಟ ಮಾಹಿತಿ ನೀಡಿಲ್ಲ.

8. ತರಬೇತಿ ಪೂರ್ಣಗೊಳಿಸಿದ ನಂತರ ಕೆಲಸ ಸಿಗುತ್ತದೆಯೇ?

ಶಾಶ್ವತ ಉದ್ಯೋಗ ಗ್ಯಾರಂಟಿ ಇಲ್ಲ, ಆದರೆ ಮುಂದಿನ ಬ್ಯಾಂಕ್ ನೇಮಕಾತಿಗೆ ಇದು ಬಹಳ ಸಹಾಯಕ.

9. ಒಂದಕ್ಕಿಂತ ಹೆಚ್ಚು ರಾಜ್ಯಕ್ಕೆ ಅರ್ಜಿ ಹಾಕಬಹುದೇ?

ಇಲ್ಲ. ಕೇವಲ ಒಂದು ರಾಜ್ಯಕ್ಕೆ ಮಾತ್ರ ಅರ್ಜಿ ಸಲ್ಲಿಸಬಹುದು.

10. ಈ ತರಬೇತಿ ಭವಿಷ್ಯಕ್ಕೆ ಹೇಗೆ ಉಪಯುಕ್ತ?

ಬ್ಯಾಂಕಿಂಗ್ ಅನುಭವ, ಪ್ರಮಾಣಪತ್ರ ಮತ್ತು ಉದ್ಯೋಗ ಅವಕಾಶಗಳ ಸಾಧ್ಯತೆ ಹೆಚ್ಚುತ್ತದೆ.

Leave a Comment